ಅತ್ಯಂತ ಪುರಾತನ ಜಿಲ್ಲೆಯಾಗಿರುವ ಜಿಂದ್ ಪ್ರಾಚೀನ ಕಾಲದ ನಗರ, ಪಟ್ಟಣ ಹಾಗೂ ಗ್ರಾಮಗಳನ್ನು ಹೊಂದಿದೆ. ಹೆಚ್ಚಿನ ಎಲ್ಲಾ ಪ್ರದೇಶಗಳಿಗೆ ಪುರಾಣದ ಹೆಸರುಗಳಿವೆ ಮತ್ತು ಇದೆಲ್ಲದರ ಬಗ್ಗೆ ಪುರಾಣ ದಂತಕಥೆಗಳಲ್ಲಿ ಉಲ್ಲೇಖವಿದೆ. ಹನ್ಸಧಾರ್ ಹಳ್ಳಿಯು ಜಿಂದ್ ನ ತೆಹ್ಸಿಲ್ ನರ್ವಾನದಲ್ಲಿದೆ.
ಋಷಿ ಕರ್ದಮನ ಮದುವೆಯಲ್ಲಿ ಪಾಲ್ಗೊಳ್ಳಲು ಬ್ರಹ್ಮ ದೇವನು ತನ್ನ ವಾಹನ ಹಂಸದಲ್ಲಿ ಬಂದನೆಂದು ಪುರಾಣಗಳಲ್ಲಿದೆ. ಹನ್ಸಧಾರ್ ಋಷಿ ಕರ್ದಮರ ಹುಟ್ಟೂರು ಮತ್ತು ಅವರು ಹಲವಾರು ವರ್ಷಗಳ ಕಾಲ ಇಲ್ಲಿ ತಪಸ್ಸನ್ನು ಆಚರಿಸಿದ್ದರು.
ಪವಿತ್ರ ನದಿಯಾಗಿರುವ ಸರಸ್ವತಿಯು ಇದೇ ಹಳ್ಳಿಯಲ್ಲಿ ಹರಿಯುತ್ತದೆ ಮತ್ತು ಪಾಂಡವರು ತಮ್ಮ ಪೂರ್ವಜರಿಗೆ ಇದೇ ನದಿಯಲ್ಲಿ ಪಿಂಡದಾನ ಮಾಡಿದ್ದರು. ಹಳ್ಳಿಯಲ್ಲಿ ಶಿವನ ಹಾಗೂ ಬಿಂದುಸಾರ ತೀರ್ಥವಿದೆ.