ಪರಿಚ್ಚಾ ಈ ಹೆಸರು ಝಾನ್ಸಿ ನಗರದ ಎರಡು ಪ್ರಮುಖ ಹೆಗ್ಗುರುತುಗಳನ್ನು ಸೂಚಿಸುತ್ತದೆ. ಒಂದು ಬೇತ್ವಾ ನದಿಯ ಮೇಲೆ ಕಟ್ಟಲಾಗಿರುವ ಆಣೆಕಟ್ಟು. ಇದರ ಹೆಸರು ಪರಿಚ್ಚ ಆಣೆಕಟ್ಟು. ಇದು ಝಾನ್ಸಿ ನಗರದಿಂದ ಸುಮಾರು 25 ಕೀಲೊ ಮೀಟರ ದೂರದಲ್ಲಿದೆ. ಇದು ಜಲಾಶಯವನ್ನು ಹೊಂದಿದ್ದು, ಈ ಮೂಲಕ ಝಾನ್ಸಿಯಿಂದ 34 ಕೀಲೊ ಮೀಟರವರೆಗೆ ನೀರನ್ನು ಸರಬರಾಜು ಮಾಡಲಾಗುತ್ತದೆ. ಈ ಆಣೆಕಟ್ಟಿನಲ್ಲಿ ಬೋಟಿಂಗ ಇಷ್ಟ ಪಡುವರಿಗಾಗಿ, ಸುಂದರವಾದ ಬೋಟಿಂಗ ವ್ಯವಸ್ಥೆ ಇದೆ.
ಪರಿಚ್ಚಾ ಇದು ಝಾನ್ಸಿ ಜಿಲ್ಲೆಯಲ್ಲಿರುವ ಒಂದು ವಸಾಹುತುವಿನ ಹೆಸರು ಹೌದು. ಇದು ಕಾನ್ಪುರ-ಝಾನ್ಸಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನೆಲೆಗೊಂಡಿದೆ. ಇದು ಸೆಂಟ್ರಲ್ ಇಂಡಸ್ಟ್ರೀಯಲ್ ಸೆಕ್ಯುರಿಟಿ ಫೋರ್ಸ (ಸಿ.ಐ.ಸಿ.ಎಫ) ರಕ್ಷಣೆಯಲ್ಲಿದೆ. ಏಕೆಂದರೆ ಇಲ್ಲಿ ಪರಿಚ್ಚ ಥರ್ಮಲ್ ಪವರ ಸ್ಟೇಷನ ಇದೆ. ಇದೊಂದು ದೊಡ್ಡ ಕಲ್ಲಿದ್ದಲು ಆಧಾರಿತ ವಿದ್ಯುತ ಸ್ಥಾವರ ಆಗಿದ್ದು ಸುಮಾರು 1140 ಮೆಗಾ ವ್ಯಾಟನಷ್ಟು ವಿದ್ಯುತ್ತನ್ನು ಉತ್ಪಾದಿಸುತ್ತದೆ.
ಪರಿಚ್ಚಾವು ಅನೇಕ ದೇವಸ್ಥಾನಗಳಿಗೆ, ಮಸಿದಿಗಳಿಗೆ, ಚರ್ಚುಗಳಿಗೆ, ಭೌದ್ಧ ವಿಹಾರಗಳಿಗೆ ನೆಲೆಯಾಗಿದೆ. ಇಲ್ಲಿ ಸಾರ್ವಜನಿಕರಿಗೆ ಉಪಯೋಗಕ್ಕೆ ಬರುವ ಬ್ಯಾಂಕುಗಳು, ಪಾರ್ಕುಗಳು, ನಾಲ್ಕು ವಿವಿಧ ಕ್ಲಬುಗಳು, ಅತಿಥಿ ಗೃಹ, ಆಸ್ಪತ್ರೆ, ಕಾಲೇಜು ಮತ್ತು ಶಾಲೆಗಳಿವೆ. ಇಲ್ಲಿ ಮಹಾರಾಣಿ ಲಕ್ಷ್ಮಿ ಬಾಯಿ ಸರಸ್ವತಿ ಶಿಶು ಮಂದಿರ ಮತ್ತು ಸೆಕ್ರೆಡ್ ಹಾರ್ಟ ಕಾನ್ವೆಂಟ್ ಸ್ಕೂಲ್ ಇದೆ.


Click it and Unblock the Notifications