Search
  • Follow NativePlanet
Share
ಮುಖಪುಟ » ಸ್ಥಳಗಳು » ಝಾನ್ಸಿ » ಆಕರ್ಷಣೆಗಳು » ಝಾನ್ಸಿ ವಸ್ತು ಸಂಗ್ರಹಾಲಯ

ಝಾನ್ಸಿ ವಸ್ತು ಸಂಗ್ರಹಾಲಯ, ಝಾನ್ಸಿ

1

ಝಾನ್ಸಿ ವಸ್ತು ಸಂಗ್ರಹಾಲಯವು ಐತಿಹಾಸಿಕ ಝಾನ್ಸಿ ಕೋಟೆಯಲ್ಲಿದೆ. ಇದು ನಗರದ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ. ಇದು ಶಸ್ತ್ರಾಸ್ತ್ರಗಳು, ಟೆರಾಕೋಟಗಳು, ಪ್ರತಿಮೆಗಳು, ಬೆಳ್ಳಿ, ಚಿನ್ನ , ಮತ್ತು ಕಂಚು ಮತ್ತು ತಾಮ್ರ ನಾಣ್ಯಗಳ ಹಾಗೂ ಅನೇಕ ಸುಂದರ ಪ್ರತಿಮೆಗಳ ಸಂಗ್ರಹವನ್ನು ಒಳಗೊಂಡಿದ್ದು ವ್ಯವಸ್ಥಿತವಾಗಿ ಪ್ರದರ್ಶಿಸುತ್ತದೆ. ಈ ವಸ್ತು ಸಂಗ್ರಹಾಲಯದಲ್ಲಿ ಪ್ರದರ್ಶಿಸಲ್ಪಟ್ಟಿರುವ ಅನೇಕ ವಸ್ತುಗಳು ಚಾಂದೇಲ ರಾಜರ ಜೀವನ ಮತ್ತು ಆಡಳಿತದ ಕುರಿತು ಮಾಹಿತಿಯನ್ನು ನೀಡುತ್ತದೆ. ಜೊತೆಗೆ ಬುಂದೇಲ ಖಂಡ ಪ್ರದೇಶದ ಇತಿಹಾಸ ಮತ್ತು ಪರಂಪರೆಯನ್ನು ಚಿತ್ರಿಸುತ್ತದೆ.

ಇಲ್ಲಿ ಪ್ರಾಚೀನ ಭಾರತ ಇತಿಹಾಸದ ಕುರಿತು ಆಸಕ್ತಿ ಇರುವ ವಿದ್ಯಾರ್ಥಿಗಳಿಗಾಗಿ ಒಂದು ಕಲಾಶಾಲೆಯಿದೆ. ಇದು ಗುಪ್ತಾ ಅವಧಿಯ ಪ್ರತಿಮೆಗಳನ್ನು ಮತ್ತು ಚಿತ್ರಗಳನ್ನು ಪ್ರದರ್ಶಿಸುತ್ತದೆ. ಇಷ್ಟೇ ಅಲ್ಲ ಈ ವಸ್ತು ಸಂಗ್ರಹಾಲಯದಲ್ಲಿ 1857 ರ ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬ್ರಿಟಿಷರು ರಾಣಿ ಲಕ್ಷ್ಮಿ ಬಾಯಿಯ ವಿರುದ್ಧ ಉಪಯೋಗಿಸಿದ ಶಸ್ತ್ರಾಸ್ತ್ರಗಳ ಮತ್ತು ಸೈನ್ಯ ಸಾಮಗ್ರಿಗಳ ಸಂಗ್ರಹವಿದೆ. ಇಲ್ಲಿ ಪ್ರತ್ಯೇಕ ವರ್ಗಗಳಿದ್ದು, ಇದು ವಿವಿಧ ಅವಧಿಗೆ ಸೇರಿದ ಚಂದೇಲ ಮತ್ತು ಬುಂದೇಲರ ಕುರಿತು ಸಮಗ್ರ ಮಾಹಿತಿಯನ್ನು ಒದಗಿಸುತ್ತದೆ. ಈ ವಸ್ತು ಸಂಗ್ರಹಾಲಯದ ಪ್ರಮುಖ ಆಕರ್ಷಣೆ ಎಂದರೆ ರಾಣಿ ಝಾನ್ಸಿ ಮತ್ತು ಆಕೆಯ ಮರಾಠಿ ಬೆಂಬಲಿಗರು ಬ್ರಿಟಿಷರ ವಿರುದ್ಧ ಬಳಸಿದ ಶಸ್ತ್ರಾಸ್ತ್ರಗಳು.

One Way
Return
From (Departure City)
To (Destination City)
Depart On
06 Sep,Sun
Return On
07 Sep,Mon
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
06 Sep,Sun
Check Out
07 Sep,Mon
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
06 Sep,Sun
Return On
07 Sep,Mon