Search
  • Follow NativePlanet
Share
ಮುಖಪುಟ » ಸ್ಥಳಗಳು » ಝಾನ್ಸಿ » ಆಕರ್ಷಣೆಗಳು » ಝಾನ್ಸಿ ಮಹೋತ್ಸವ

ಝಾನ್ಸಿ ಮಹೋತ್ಸವ, ಝಾನ್ಸಿ

1

ಝಾನ್ಸಿ ಮಹೋತ್ಸವವನ್ನು ಉತ್ತರ ಪ್ರದೇಶ ಸರ್ಕಾರದ ಪ್ರವಾಸೋದ್ಯಮ ಇಲಾಖೆಯು ಪ್ರತಿ ವರ್ಷ ಫೆಬ್ರುವರಿ ತಿಂಗಳ ಅಂತ್ಯ ಇಲ್ಲವೇ ಮಾರ್ಚ ತಿಂಗಳ ಆರಂಭದಲ್ಲಿ ಆಯೋಜಿಸುತ್ತದೆ. ಇದು ಒಂದು ವಾರದ ಉತ್ಸವವಾಗಿದ್ದು, ಅಸಂಖ್ಯಾತ ಪ್ರವಾಸಿಗರನ್ನು ಮತ್ತು ರಸಿಕರನ್ನು  ತನ್ನ ಕಡೆಗೆ ಆಕರ್ಷಿಸುತ್ತದೆ.

ಈ ಮಹೋತ್ಸವವು ಹಲವಾರು ಸಂತೋಷಕರ ಸಂಗತಿಗಳಿಂದ ತುಂಬಿಕೊಂಡಿದೆ. ಇಲಗಲಿ ಬುಂದೇಲ ಖಂಡದ ಜನಾಂಗೀಯತೆ, ಸಂಪ್ರದಾಯ, ಸಾಮಾಜಿಕ ಪದ್ಧತಿಗಳು, ಆಚರಣೆಗಳು , ಧಾರ್ಮಿಕ ನಂಬಿಕೆಗಳು, ಸಂಸ್ಕತಿ ಮತ್ತು ಬುಂದೇಲ ಖಂಡ ಜನರ ಜೀವನ ಶೈಲಿಯ ಕುರಿತು ಮಾಹಿತಿಯನ್ನು ನೀಡುತ್ತದೆ.

ಈ ಉತ್ಸವದ ಪ್ರಮುಖ ಕಾರ್ಯಕ್ರಮಗಳನ್ನು ಪುರಾತತ್ವ ಸಂಗ್ರಹಾಲಯದ ಬಳಿ ಇರುವ ಒಂದು ಮುಕ್ತ ಸಭಾಭವನದಲ್ಲಿ ಸಂಜೆಯ ಸಮಯದಲ್ಲಿ ನಡೆಸಲಾಗುತ್ತದೆ. ಈ ಕಾರ್ಯಕ್ರಮಗಳು ಸಂಗೀತ ಮತ್ತು ನೃತ್ಯವನ್ನು ಹೊಂದಿರುತ್ತವೆ. ಇಲ್ಲಿ ಜಾನಪದ ಗೀತೆಗಳು ಮತ್ತು ಅಲ್ಲಾ ಗೀತೆಗಳ ಕಾರ್ಯಕ್ರಮಗಳು ಸಹ ಇದ್ದು, ಇದು ಈ ಪ್ರದೇಶದ ಸಂಸ್ಕತಿ ಮತ್ತು ಪರಂಪರೆಯನ್ನು ಪ್ರತಿನಿಧಿಸುತ್ತದೆ.

ಈ ಮಹೋತ್ಸವದಲ್ಲಿ ಅನೇಕ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತದೆ. ರಂಗೋಲಿ, ಮೆಹಂದಿ, ಅಡಿಗೆ ಸ್ಪರ್ಧೆ ಹೀಗೆ ಮುಂತಾದ ಸ್ಪರ್ಧೆಗಳನ್ನು ರಾಜ್ಯ ಪುರಾತತ್ವ ಸಂಗ್ರಹಾಲಯದಲ್ಲಿ ಅಯೋಜಿಸಲಾಗುತ್ತದೆ. ನಾರಾಯಣ ಭಾಗ ಮತ್ತು ರಾಣಿ ಲಕ್ಷ್ಮಿ ಬಾಯಿ ಉದ್ಯಾನವನದಲ್ಲಿ ಹಣ್ಣು, ಹೂವು ಮತ್ತು ತರಕಾರಿಗಳು ಮತ್ತು ಕರಕುಶಲ ವಸ್ತುಗಳ ಪ್ರದರ್ಶನವಿರುತ್ತದೆ. ಹೀಗಾಗಿ ಈ ಉತ್ಸವವನ್ನು ಜರುಗಿಸಲು ಅಪಾರವಾದ ಸ್ಥಳ ಬೇಕು.

One Way
Return
From (Departure City)
To (Destination City)
Depart On
25 Jul,Sat
Return On
26 Jul,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Jul,Sat
Check Out
26 Jul,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Jul,Sat
Return On
26 Jul,Sun