Search
  • Follow NativePlanet
Share
ಮುಖಪುಟ » ಸ್ಥಳಗಳು » ಝಾನ್ಸಿ » ಆಕರ್ಷಣೆಗಳು » ಬರುವಾ ಸಾಗರ

ಬರುವಾ ಸಾಗರ, ಝಾನ್ಸಿ

1

ಬರುವಾ ಸಾಗರ ಇದು ಝಾನ್ಸಿಯಲ್ಲಿರುವ ಒಂದು ನಗರವಾಗಿದೆ. ಇಲ್ಲಿ ಒಂದು ಭವ್ಯವಾದ ಸರೋವರವಿದ್ದು ಇದನ್ನು ಬರುವಾ ಸಾಗರ ಎಂದೇ ಕರೆಯುತ್ತಾರೆ. ಹೀಗಾಗಿ ಈ ನಗರವು ಇದೇ ಹೆಸರಿನಿಂದ ಪ್ರಸಿದ್ಧಿಯನ್ನು ಪಡೆದಿದೆ. ಇದು ಬೇತ್ವಾ ನದಿಯ ದಡದ ಮೇಲೆ ನೆಲೆಗೊಂಡಿದ್ದು, ಝಾನ್ಸಿ ಯಿಂದ ಸುಮಾರು 25 ಕೀಲೊ ಮೀಟರ ದೂರದಲ್ಲಿದೆ.

ಇದನ್ನು ರಾಜಾ ಉದಿತ ಸಿಂಗನು ನಿರ್ಮಿಸಿದನು. ಇದು ಅನೇಕ ಸುಂದರ ದೃಶ್ಯಗಳನ್ನು ಒಳಗೊಂಡಿದ್ದು ಅಸಂಖ್ಯಾತ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಈ ನಗರವು ಸರೋವರದ ಹೊರತಾಗಿಯೂ ಅನೇಕ ಪ್ರಸಿದ್ದ ಐತಿಹಾಸಿಕ ಪ್ರವಾಸಿ ಸ್ಥಳಗಳನ್ನು ಒಳಗೊಂಡಿದೆ. ಇಲ್ಲಿ ಪ್ರಸಿದ್ಧವಾದ ಬುಂದೇಲ ಕಂಡ ಕೋಟೆ ಇದೆ. ಇದು ಬೆಟ್ಟದ ಮೇಲೆ ನೆಲೆಗೊಂಡಿದ್ದು, ನಗರಕ್ಕೆ ಶತ್ರುಗಳಿಂದ ರಕ್ಷಣೆಯನ್ನು ನೀಡುತ್ತಿತ್ತು. ಈ ಮರಳು ಗಲ್ಲಿನ ಕೋಟೆಯು ಬೇತ್ವಾ ನದಿಯ ಜಲಾಶಯದ ವಿಹಂಗಮ ನೋಟಗಳನ್ನು ನೋಡಲು ಅವಕಾಶವನ್ನು ಒದಗಿಸುತ್ತದೆ.

ಈ ನಗರವು ಕೆಲವು ಪವಿತ್ರ ಸ್ಥಳಗಳಿಗೆ ಹೆಸರುವಾಸಿಯಾಗಿದೆ. ಇಲ್ಲಿ ಪ್ರಾಚೀನ ದುರ್ಗಾ ದೇವಾಲಯವಿದ್ದು, ಇದು ಜರಾಯಿ ಮಠ ಎಂದೇ ಪ್ರಸಿದ್ಧಯಾಗಿದೆ.ಇದನ್ನು ಕ್ರಿ.ಶ 860 ರಲ್ಲಿ ಪ್ರತಿಹಾರ ವಾಸ್ತು ಶೈಲಿಯಲ್ಲಿ ನಿರ್ಮಿಸಲಾಗಿದೆ. ಇದರ ಸುತ್ತಲೂ ನಾಲಕು ಮೂಲೆಯಲ್ಲಿ ನಾಲ್ಕು ಸಣ್ಣ ಸಣ್ಣ ದೇವಾಲಯಗಳಿವೆ. ಈ ದೇವಸ್ಥಾನವನ್ನು 1928 ರಲ್ಲಿ ಭಾರತದ ಪುರಾತತ್ವ ಸಮೀಕ್ಷೆಯ ಮೂಲಕ ರಕ್ಷಿತ ಸ್ಮಾರಕ ಪಟ್ಟಿಯಲ್ಲಿ ಸೇರಿಸಲಾಗಿದೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed