Search
  • Follow NativePlanet
Share
ಮುಖಪುಟ » ಸ್ಥಳಗಳು » ಝಾಲಾವರ್ » ಆಕರ್ಷಣೆಗಳು » ಝಲಾರಾ ಪಟಾಣ್

ಝಲಾರಾ ಪಟಾಣ್, ಝಾಲಾವರ್

1

ಝಾಲಾರಾ ಪಟಾಣ್‌ ಇರುವುದು ಝಾಲಾವರ್ ನಿಂದ ಸುಮಾರು 7 ಕಿ.ಮೀ ದೂರದಲ್ಲಿ. ಈ ಪ್ರದೇಶದ ವಿಶೇಷತೆಯೆಂದರೆ ಇಡೀ ನಗರವನ್ನು ಪ್ರಾಕಾರದಿಂದ ರಕ್ಷಿಸಲಾಗಿದೆ. ಮಹಾರಾಜ ವಿಕ್ರಮಾದಿತ್ಯನ ಮೊಮ್ಮಗನಾದ ಪಾರ್ಮಾರ ಚಂದ್ರ ಸೇನ್‌ ಇಲ್ಲಿ ಈ ನಗರವನ್ನು ನಿರ್ಮಿಸಿದ್ದನು. ಝಲಾರಾ ಪಟಾಣ್‌ವನ್ನು ದೇವಸ್ಥಾನದ ಗಂಟೆಗಳ ನಗರ ಎಂದು ಕರೆಯಲಾಗಿದೆ. ಇದು ಚಂದ್ರಭಾಗ ನದಿಯ ದಡದಲ್ಲಿದೆ. ಬ್ರಿಟಿಷ್‌ ಈಸ್ಟ್ ಇಂಡಿಯಾ ಕಂಪನಿಯ ಅಧಿಕಾರಿ ಜೇಮ್ಸ್‌ ಟೋಡ್‌ ಲೆಕ್ಕ ಹಾಕಿದ ಪ್ರಕಾರ ಇಲ್ಲಿ 108 ದೇವಸ್ಥಾನಗಳು ಇದ್ದವಂತೆ. ಇಲ್ಲಿನ ಆಕರ್ಷಕ ಸಂಗತಿಯೆಂದರೆ 100 ಅಡಿ ಎತ್ತರದ ದೇವಸ್ಥಾನ. ಇದು 10ನೇ ಶತಮಾನದ ಸೂರ್ಯ ದೇವಸ್ಥಾನವಾಗಿದೆ. ಇದು ಸುಂದರವಾದ ಕಲಾಕೃತಿಗಳನ್ನು ಹೊಂದಿದೆ.

ಇದರ ಜೊತೆಗೆ, 6ರಿಂದ 16ನೇ ಶತಮಾನಗಳವರೆಗೆ ನಿರ್ಮಿಸಿದ ದೇವಸ್ಥಾನಗಳ ಒಂದು ಗುಂಪೇ ಇದೆ. ಪ್ರಮುಖ ಎರಡು ದೇವಸ್ಥಾನಗಳಾದ ಶಾಂತಿನಾಥ ಜೈನ ದೇವಸ್ಥಾನ ಮತ್ತು ಶ್ರೀ ದ್ವಾರಕೀಶ ದೇವಸ್ಥಾನಗಳಾಗಿದ್ದು, ಇವು ಝಾಲಾ ಜಾಲಿಮ್‌ ಸಿಂಗ್‌ರಿಂದ ನಿರ್ಮಾಣಗೊಂಡಿತು. ಇದು 11ನೇ ಶತಮಾನದಲ್ಲಿ ನಿರ್ಮಾಣಗೊಂಡಿದ್ದು. ಪ್ರವಾಸಿಗರು ದ್ವಾರಕೀಶ ದೇವಸ್ಥಾನಕ್ಕೆ ಭೇಟಿ ನೀಡುವಾಗ ಹರ್ಬಲ್‌ ಗಾರ್ಡನ್‌ ಮತ್ತು ಚೌಪಾತಿಯನ್ನೂ ಕೂಡಾ ನೋಡಬಹುದು.

One Way
Return
From (Departure City)
To (Destination City)
Depart On
08 Sep,Tue
Return On
09 Sep,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Sep,Tue
Check Out
09 Sep,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Sep,Tue
Return On
09 Sep,Wed