ಸಿಸೋಡಿಯಾ ರಾಣಿ ಕಾ ಬಾಗ್, ಜೈಪುರ ನಗರದಿಂದ ಸುಮಾರು 8 ಕಿ.ಮೀ ದೂರದಲ್ಲಿರುವ ಜನಪ್ರಿಯ ಉದ್ಯಾನವನ. ಇದನ್ನು 1728ರಲ್ಲಿ ರಾಜ ಸವಾಯಿ ಜೈ ಸಿಂಗ್, ತನ್ನ ಸಿಸೋಡಿಯಾ ರಾಣಿಗಾಗಿ ನಿರ್ಮಿಸಿದರು. ಇದರ ವಾಸ್ತುಶಿಲ್ಪ ಶೈಲಿಯು ಭಾರತೀಯ ಮತ್ತು ಮೊಘಲ್ ಶೈಲಿಯದ್ದು. ಕಾರಂಜಿಗಳು, ಗ್ಯಾಲರಿಗಳು ಮತ್ತು ಪೆವಿಲಿಯನ್‌ಗಳನ್ನು ಇಲ್ಲಿ ನಿರ್ಮಿಸಲಾಗಿದೆ. ಪ್ರವಾಸಿಗರು ರಾಧಾ ಮತ್ತು ಕೃಷ್ಣರ ಮೂರ್ತಿಗಳನ್ನೂ ಕೂಡಾ ನೋಡಬಹುದು. ಈ ಉದ್ಯಾನದಲ್ಲಿ ಈಗ ಮದುವೆಗಳು ಮತ್ತಿತರ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ.


Click it and Unblock the Notifications