ಜೈಗಢ ಕೋಟೆಯನ್ನು ವಿಜಯದ ಕೋಟೆ ಎಂದೂ ಕರೆಯಲಾಗುತ್ತದೆ. ಇದು ಜೈಪುರದಿಂದ ಸುಮಾರು 15 ಕಿ.ಮೀ ದೂರದಲ್ಲಿರುವ ಪ್ರಮುಖ ಪ್ರವಾಸಿ ತಾಣ. ಅಂಬರ್ ಕೋಟೆಯಿಂದ ಸುಮಾರು 400 ಅಡಿ ಎತ್ತರದಲ್ಲಿದೆ. ಕೋಟೆಯು ಎರಡು ಪ್ರಮುಖ ಪ್ರವೇಶದ್ವಾರಗಳನ್ನು ಹೊಂದಿದೆ. ಇದನ್ನು ಡುಂಗರ್ ದರ್ವಾಜಾ ಮತ್ತು ಅವಾನಿ ದರ್ವಾಜಾ ಎಂದು ಕರೆಯಲಾಗುತ್ತದೆ. ಇವುಗಳಲ್ಲಿ ಒಂದು ದಕ್ಷಿಣಕ್ಕೆ ಮತ್ತು ಇನ್ನೊಂದು ಪೂರ್ವ ದಿಕ್ಕಿಗಿದೆ. ಸಾಗರ್ ತಲಾವ್ ಕೆರೆಯು ಕೋಟೆಗೆ ಪ್ರಮುಖ ನೀರಿನ ಮೂಲವಾಗಿದೆ.
ಕೋಟೆಯನ್ನು ಸೇನೆಯ ಉದ್ದೇಶಕ್ಕೆ ನಿರ್ಮಿಸಲಾಗಿತ್ತು. ಸುಮಾರು 3 ಕಿ.ಮೀ ವ್ಯಾಪ್ತಿಯನ್ನು ಈ ಕೋಟೆ ಹೊಂದಿದೆ. ಕೋಟೆಯ ಮೇಲೆ ಗೋಪುರವಿದ್ದು ಇದನ್ನು ಜೈವಾನ್ ಎಂದು ಕರೆಯಲಾಗಿದೆ. ಇದು 50 ಟನ್ ಸಾಮರ್ಥ್ಯದ್ದು. 8 ಮೀಟರು ಉದ್ದದ ಬ್ಯಾರೆಲ್‌ನ್ನು ಇದು ಹೊಂದಿದೆ. ಜಗತ್ತಿನಲ್ಲೇ ಈ ಕ್ಯಾನನ್ನು ಅತ್ಯಂತ ದೊಡ್ಡದು ಎಂದು ಪರಿಗಣಿಸಲಾಗಿದೆ. ಕೋಟೆಯ ಅತ್ಯಂತ ಕೊನೆಯ ತುದಿ ದಿಯಾ ಬುರ್ಜ್. ಇದು ಏಳು ಮಹಡಿಯ ರಚನೆಯಾಗಿದ್ದು ಇಡೀ ನಗರದ ಪಕ್ಷಿನೋಟವನ್ನು ಇದು ನೀಡುತ್ತದೆ.
ಈ ಕೋಟೆಯಲ್ಲಿ ಖಜಾಂಚಿಯನ್ನು ಹತ್ಯೆ ಮಾಡಲಾಗಿದೆ ಎಂದು ಹೇಳಲಾಗುತ್ತದೆ. ಕೋಟೆಯಲ್ಲಿ ಮ್ಯೂಸಿಯಂ ಕೂಡಾ ಇದ್ದು ಇದರಲ್ಲಿ, ನಾಣ್ಯಗಳು, ಕ್ಯಾನನ್‌ಗಳು ಮತ್ತು ಗೊಂಬೆಗಳನ್ನು ಪ್ರದರ್ಶನಕ್ಕಿಡಲಾಗಿದೆ.


Click it and Unblock the Notifications