ತಿರ್ಶಿ ಫಾಲ್ಸ್ ಮೇಘಾಲಯದ ಮತ್ತೊಂದು ಹೆಚ್ಚು ಜನಪ್ರಿಯವಲ್ಲದ ಖಜಾನೆ. ಇದು ಜೊವಾಯಿ-ಶಿಲ್ಲಾಂಗ್ ರಸ್ತೆಯಲ್ಲಿದೆ. ಸುಂದರ ಫಾಲ್ಸ್ ಮೆಟ್ಟಿಲುಗಳಂತೆ ಹರಿದು ಬರುವ ನೀರು ಬಿಳಿ ಮುಸುಕಿನಂತೆ ಕಾಣುತ್ತದೆ. ಕಮಾನಿನ ಸೇತುವೆ ಈ ಫಾಲ್ಸ್ ಗೆ ಸಂಪರ್ಕ ಕಲ್ಪಿಸಿದ್ದು, ಸುಮಾರು 2000 ಮೆಟ್ಟಿಲುಗಳು ಫಾಲ್ಸ್ ನ ಬುಡಕ್ಕೆ ಪ್ರವಾಸಿಗರನ್ನು ತಲುಪಿಸುತ್ತದೆ. ದಾರಿಯಲ್ಲಿ ಮನಮೋಹಕವಾಗಿ ಕಾಣಿಸುವಂತಹ ಭತ್ತದ ಗದ್ದೆಗಳ ಸಾಲುಗಳನ್ನು ನೋಡಬಹುದಾಗಿದೆ.
ಶಿಲ್ಲಾಂಗ್ ನಲ್ಲಿರುವ ಎಲಿಪೆಂಟ್ ಫಾಲ್ಸ್ ನಂತೆ ಇಲ್ಲೂ ನೀರು ಬೀಳುವ ಸಮೀಪಕ್ಕೆ ಹೋಗಬಹುದು ಮತ್ತು ನೀರಿನ ಸ್ಫೋಟವನ್ನು ನೋಡಿ ಖುಷಿಪಡಬಹುದು. ಎಲಿಪೆಂಟ್ ಫಾಲ್ಸ್ ನಿಂತ ತಿರ್ಶಿ ಫಾಲ್ಸ್ ಮೂರು ಪಟ್ಟು ಉದ್ದವಾಗಿದೆ.
ಮಳೆಗಾಲದಲ್ಲಿ ಈ ಫಾಲ್ಸ್ ಗೆ ಭೇಟಿ ನೀಡಲು ಸೂಕ್ತ ಸಮಯ. ಈ ವೇಳೆ ಫಾಲ್ಸ್ ತನ್ನ ಗರಿಷ್ಠ ಓಜಸ್ಸನ್ನು ಹೊಂದಿರುತ್ತದೆ. ಜೊವಾಯಿ-ಶಿಲ್ಲಾಂಗ್ ಹೈವೇಗಿಂತ ಒಂದು ಕಿ.ಮೀ ದೂರದಲ್ಲಿರುವ ಇಲ್ಲಿಗೆ ಥಡ್ಲಸ್ಕೈನ್ ಗೆ ಭೇಟಿ ನೀಡಿದ ತಕ್ಷಣ ಬರಬಹುದು.


Click it and Unblock the Notifications