ಜರೈನ್ ಪಿಚರ್ ಪ್ಲ್ಯಾಂಟ್ ಸರೋವರಕ್ಕೆ ಇದರ ಸುತ್ತಲು ಇರುವ ಪಿಚರ್ ಉದ್ಯಾನದಿಂದ ಈ ಹೆಸರು ಬಂದಿದೆ. ಇದನ್ನು ಮೇಘಾಲಯ ಸರ್ಕಾರದ ಭೂಮಿ ಮತ್ತು ಜಲ ಸಂರಕ್ಷಣಾ ವಿಭಾಗ ನಿರ್ಮಿಸಿದೆ. ಈ ಸರೋವರ ಜೊವಾಯಿ-ಅಮ್ಲರೆಮ್ ರಸ್ತೆಯಲ್ಲಿದೆ. ಮಾಂಸಾಹಾರಿ ನೆಪೆಂಥೀಸ್ ಖಸಿಯಾನ ಹೂಜಿ ಎಲೆಗಳು ಸುಮಾರು 50,00 ಚದರ ಅಡಿ ಪ್ರದೇಶದಲ್ಲಿ ವ್ಯಾಪಿಸಿದೆ. ಬೋಟ್ ಹೌಸ್ ನಿಂದ ಹಿಡಿದು ಸರೋವರದ ನಡುವೆ ಇರುವ ಕಾರಂಜಿ ಕೂಡ ಪಿಚರ್ ಗಿಡದ ಆಕಾರದಲ್ಲಿದೆ.
ಸರೋವರದಲ್ಲಿ ಹಸಿರು ಮನೆ, ಕಮಾನಿನಂತಹ ಸೇತುವೆ ಮತ್ತು ಜಲ್ಲಿಕಲ್ಲಿನ ಮಾರ್ಗಗಳಿವೆ. ಒಂದು ಸುಂದರವಾದ ದಿನದಲ್ಲಿ ಹತ್ತಿರದ ದಿಣ್ಣೆಗಳ ನೀರಿನ ಮೇಲೆ ಪ್ರತಿಫಲಿಸುತ್ತದೆ. ಇಲ್ಲಿ ಆಕರ್ಷಕ ಬೋಟ್ ರೈಡ್ ಕೂಡ ಇದೆ. ಜರೈನ್ ಪಿಚರ್ ಪ್ಲ್ಯಾಂಡ್ ಸರೋವರಕ್ಕೆ ವಲಸೆ ಪಕ್ಷಿಗಳು ಬಹುಸಂಖ್ಯೆಯಲ್ಲಿ ಬರುತ್ತಿರುವ ಕಾರಣ ಪಕ್ಷಿವೀಕ್ಷಕರಿಗೆ ಸೂಕ್ತ ತಾಣವಾಗಿದೆ. ಶಿಲ್ಲಾಂಗ್ ನಿಂದ ಬಾಡಿಗೆ ಕಾರನ್ನು ಪಡೆದು ನವಂಬರ್ ನಿಂದ ಜೂನ್ ಮಧ್ಯೆ ಇಲ್ಲಿಗೆ ಭೇಟಿ ನೀಡಬಹುದಾಗಿದೆ.


Click it and Unblock the Notifications