ಪವಿತ್ರ ಕಲ್ಲೆಂದು ಕರೆಯಲ್ಪಡುವ ಇಯಾವ್ಮ್ಸಿಯಾಂಗ್ ಜೈನ್ತಿಯಾ ಹಿಲ್ಸ್ ನ ಬೃಹತ್ ಮಾರುಕಟ್ಟೆಗೂ ಹೆಸರುವಾಸಿಯಾಗಿದೆ. ಮಾರುಕಟ್ಟೆಯ ಮಧ್ಯಭಾಗದಲ್ಲಿರುವ ಪವಿತ್ರ ಕಲ್ಲಿನಿಂದಾಗಿ ಪ್ರದೇಶಕ್ಕೆ ಈ ಹೆಸರು ಬಂದಿದೆ. ಬಹದೈನ್ಖಲಮ್ ಉತ್ಸವದ ವೇಳೆ ಸ್ಥಳೀಯರು ಈ ಕಲ್ಲಿನ ಸುತ್ತ ಸೇರಿ ಪೂಜೆ ಸಲ್ಲಿಸುತ್ತಾರೆ.
ನಗರದ ಎಲ್ಲೆಡೆಯಿರುವ ಸಣ್ಣಸಣ್ಣ ಹೊಳೆಗಳನ್ನು ದಾಟಲು ಖಾಸಿ ಮತ್ತು ಜೈನ್ತಿಯಾ ಜನರು ರಚಿಸಿರುವ ಬಿದಿರಿನ ಸೇತುವೆಗಳು ಈ ಪ್ರದೇಶದ ಅಂದವನ್ನು ಮತ್ತಷ್ಟು ಹೆಚ್ಚಿಸಿದೆ. ಇಯಾವ್ಮ್ಸಿಯಾಂಗ್ ಗೆ ಭೇಟಿ ನೀಡುವ ಪ್ರವಾಸಿಗಳಿಗೆ ಅತ್ಯುತ್ತಮ ಶಾಪಿಂಗ್ ಪ್ರದೇಶವಾಗಿದೆ. ಕರಕುಶಲ ವಸ್ತುಗಳು, ಬಿದಿರಿನ ಬುಟ್ಟಿಗಳು, ಬಿದಿರಿನ ಮ್ಯಾಟ್ ಗಳು, ಮಳೆಗೂ ಏನೂ ಆಗದ ಸ್ಟೂಲ್ ಗಳು ಮತ್ತು ಮಲಗುವ ಚಾಪೆಗಳು ಇಲ್ಲಿ ಸಿಗುತ್ತದೆ. ಈ ನಗರ ಜೀವನದೊಂದಿಗೆ ಬೆರೆತಿರುವ ನಗರವಾಗಿದೆ.
ಶಿಲ್ಲಾಂಗ್ ಮತ್ತು ಜೊವಾಯಿಯಿಂದ ಟೂರಿಸ್ಟ್ ಬಸ್ ಅಥವಾ ಕ್ಯಾಬ್ ನ್ನೇರಿ ಇಯಾವ್ಮ್ಸಿಯಾಂಗ್ ಗೆ ಸುಲಭವಾಗಿ ತಲುಪಬಹುದಾಗಿದೆ.


Click it and Unblock the Notifications