Search
  • Follow NativePlanet
Share
ಮುಖಪುಟ » ಸ್ಥಳಗಳು » ಜಾಗೇಶ್ವರ್ » ಆಕರ್ಷಣೆಗಳು » ಜಾಗೇಶ್ವರ ಮಹಾದೇವ್ ದೇವಾಲಯ

ಜಾಗೇಶ್ವರ ಮಹಾದೇವ್ ದೇವಾಲಯ, ಜಾಗೇಶ್ವರ್

1

ಜಾಗೇಶ್ವರ ಮಹಾದೇವ್ ದೇವಾಲಯ ಅಥವಾ ತರುಣ್ ಜಾಗೇಶ್ವರ ದೇವಾಲಯವು ಇಲ್ಲಿನ ಪ್ರಸಿದ್ಧ ದೇವಾಲಯವಾಗಿದೆ. ಆಯುಧಪಾಣಿಗಳಾಗಿ ನಿಂತಿರುವ ದ್ವಾರಪಾಲಕರಾದ ನಂದಿ ಮತ್ತು ಸ್ಕಂದಿ ವಿಗ್ರಹಗಳನ್ನು ದೇವಾಲಯದ ಪ್ರವೇಶದ್ವಾರದಲ್ಲಿ ನಾವು ಕಾಣಬಹುದು. ಬಾಲ್ ಜಾಗೇಶ್ವರ ಅಥವಾ ಮಗುವಿನ ರೂಪದಲ್ಲಿರುವ ಶಿವನನ್ನು ಹೊಂದಿರುವ ದೇವಾಲಯದ ಮುಖ್ಯ ಸಂಕೀರ್ಣವು ಪಶ್ಚಿಮಾಭಿಮುಖಿಯಾಗಿ ನಿಂತಿದೆ.

ದಂತಕಥೆಯ ಪ್ರಕಾರ, ಪರಶಿವನು ಇಲ್ಲಿಗೆ ಧ್ಯಾನ ಮಾಡಲು ಆಗಮಿಸಿದರಂತೆ. ಇದನ್ನು ಅರಿತ ಈ ಹಳ್ಳಿಯ ಹೆಂಗಸರು ಶಿವನ ದರ್ಶನ ಭಾಗ್ಯ ಪಡೆಯಲು ಒಂದುಗೂಡಿದರಂತೆ. ಇದನ್ನು ತಿಳಿದ ಈ ಊರಿನ ಗಂಡಸರು ತಮ್ಮ ಹೆಂಗಸರನ್ನು ಮರಳು ಮಾಡಿದ ಆ ಸಂನ್ಯಾಸಿ ಯಾರು ಎಂದು ನೋಡಲು ಕೋಪಾವೇಶದಿಂದ ಅಲ್ಲಿಗೆ ಬಂದರು. ಆಗ ಪರಶಿವನು ಅಲ್ಲಿನ ಗೊಂದಲಿನ ಸಂದರ್ಭವನ್ನು ತಿಳಿಗೊಳಿಸಲು ತನ್ನನ್ನು ತಾನು ಒಂದು ಮಗುವಾಗಿ ಪರಿವರ್ತಿಸಿಕೊಂಡನಂತೆ.

ಈ ದೇವಾಲಯದಲ್ಲಿರುವ ಶಿವಲಿಂಗವು ಎರಡು ಭಾಗಗಳಾಗಿ ವಿಭಾಗಿಸಲ್ಪಟ್ಟಿದೆ. ಇದರಲ್ಲಿ ದೊಡ್ಡ ಭಾಗವು ಶಿವನನ್ನು ಪ್ರತಿನಿಧಿಸಿದರೆ, ಚಿಕ್ಕದು ಪಾರ್ವತಿ ದೇವಿಯನ್ನು ಪ್ರತಿನಿಧಿಸುತ್ತದೆ. ಈ ದೇವಾಲಯದ ಮತ್ತೊಂದು ವಿಶೇಷತೆ ಎಂದರೆ ಇಲ್ಲಿನ "ಅಖಂಡ್ ಜ್ಯೋತಿ". ನಂಬಿಕೆಗಳ ಪ್ರಕಾರ, ಈ ಜ್ಯೋತಿಯು ಅನಾದಿ ಕಾಲದಿಂದ ಇಂದಿನವರೆಗೂ ಆರದೆ ಉರಿಯುತ್ತಿದೆಯಂತೆ. ಅಲ್ಲದೆ ಇಲ್ಲಿ ಎರಡು ಅಷ್ಟಧಾತು ಚಿತ್ರಗಳಿವೆ. ಇವು ಚಾಂದ್ ರಾಜರಾದ ದೀಪ್‍ಚಂದ್ ಮತ್ತು ತ್ರಿಪಲ್‍ಚಂದ್‍ರ ಚಿತ್ರಗಳಾಗಿದ್ದು, ಇದನ್ನು ಇಲ್ಲಿನ ಶಿವಲಿಂಗದ ಹಿಂದೆ ನಾವು ಕಾಣಬಹುದು.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed