ಪಿಸಾನಹರಿ ಕಿ ಮದಿಯಾ ದಿಗಂಬರ ಜೈನ ಸಮುದಾಯದ ಪವಿತ್ರ ಯಾತ್ರಾಸ್ಥಳ. ಈ ಜೈನ ದೇವಾಲಯವು ನೇತಾಜಿ ಸುಭಾಷ್ ಚಂದ್ರ ಬೋಸ್ ವೈದ್ಯಕೀಯ ಕಾಲೇಜಿನ ಸಮೀಪದಲ್ಲಿದೆ. ಇದು 500 ವರ್ಷಗಳ ಪುರಾತನ ದೇವಾಲಯ. ಇದು ತನ್ನ ವಾಸ್ತು ಶಿಲ್ಪ ಕಲೆಗೆ ಹೆಸರುವಾಸಿಯಾಗಿದೆ. ಇಲ್ಲಿನ ಪುರಾಣಗಳ ಪ್ರಕಾರ ಈ ದೇವಾಲಯವನ್ನು ಒಬ್ಬ ಬಡ ಮಹಿಳೆಯು ಜೈನ ಸಂನ್ಯಾಸಿಯ ಧ್ವನಿ ಕೇಳಿ ಕಟ್ಟಿಸಿದಳಂತೆ. ಆ ಸಂನ್ಯಾಸಿಯ ಮಾತುಗಳು ಆಕೆಗೆ ಈ ದೇವಾಲಯವನ್ನು ಕಟ್ಟಿಸಲು ಸ್ಪೂರ್ತಿ ನೀಡಿತಂತೆ. ಇಂದಿಗೂ ಆ ಮಹಿಳೆ ಹಾಕಿದಳು ಎನ್ನಲಾದ ಕಲ್ಲುಗಳು ಈ ದೇವಾಲಯದಲ್ಲಿ ಹಾಗೇ ಉಳಿದಿವೆ. ಆಕೆಯ ಭಕ್ತಿ ಮತ್ತು ಶ್ರದ್ಧೆಗೆ ಇದು ಸಾಕ್ಷಿಯಾಗಿದೆ. ಆಕೆಯ ಗೌರವಾರ್ಥವಾಗಿ ಈ ದೇವಾಲಯಕ್ಕೆ ಪಿಸಾನಹರಿ ಕಿ ಮದಿಯಾ ಎಂದು ಹೆಸರಿಡಲಾಗಿದೆ. ಇದರರ್ಥ “ಬೀಸುವ ಕಲ್ಲಿನಲ್ಲಿ ಗೋಧಿ ಹಿಟ್ಟು ಬೀಸುತ್ತಿದ್ದ ಮಹಿಳೆ” ಎಂದು. ಈ ದೇವಾಲಯದ ಸುತ್ತಲ ಪ್ರಾಕೃತಿಕ ಸೌಂದರ್ಯ ಇದನ್ನು ಇನ್ನಷ್ಟು ಆಕರ್ಷಕವಾಗಿಸಿದೆ. ಪ್ರತಿ ವರ್ಷ ಇಲ್ಲಿಗೆ ಸಾವಿರಾರು ಭಕ್ತಾದಿಗಳು ಬರುತ್ತಾರೆ.