Search
  • Follow NativePlanet
Share
ಮುಖಪುಟ » ಸ್ಥಳಗಳು » ಜಬಲ್ಪೂರ್ » ಹವಾಮಾನ

ಜಬಲ್ಪೂರ್ ಹವಾಮಾನ

ಚಳಿಗಾಲ ಜಬಲ್ಪೂರಕ್ಕೆ ಭೇಟಿ ನೀಡಲು ಸೂಕ್ತವಾದ ಸಮಯ. ಪ್ರವಾಸಕ್ಕೆ ಮುನ್ನ ನಗರದ ಉಷ್ಣಾಂಶವನ್ನು ತಿಳಿದುಕೊಳ್ಳುವುದು ಒಳ್ಳೆಯದು. ಉಣ್ಣೆಯ ಬಟ್ಟೆಗಳನ್ನು ಒಯ್ಯುವುದು ಉತ್ತಮ.

ಬೇಸಿಗೆಗಾಲ

ಏಪ್ರಿಲ್- ಜೂನ್ ಬೇಸಿಗೆಕಾಲ. ಈ ಸಮಯದಲ್ಲಿ ಉಷ್ಣಾಂಶವು 48 ಡಿಗ್ರಿ ಸೆಲ್ಸಿಯಸ್ಗಳಷ್ಟಿರುತ್ತದೆ. ಈ ದಿನಗಳಲ್ಲಿ ಅಧಿಕ ತಾಪಮಾನವಿರುತ್ತದೆ. ಈ ಸಮಯದಲ್ಲಿ ಇಲ್ಲಿಗೆ ಪ್ರವಾಸ ಹೋಗುವುದು ಸೂಕ್ತವಲ್ಲ.

ಮಳೆಗಾಲ

ಜೂನ್-ಆಗಸ್ಟ್ ಮಳೆಗಾಲ. ಈ ಪ್ರದೇಶದಲ್ಲಿ ಒಳ್ಳೆಯ ಮಳೆಯಾಗುತ್ತದೆ. ಜಬಲ್ಪೂರವು ನೈರುತ್ಯ ಮಳೆಯನ್ನು ಪಡೆಯುವುದರಿಂದ ಇಲ್ಲಿ ಅತಿಹೆಚ್ಚು ಮಳೆಯಾಗುವುದು ಮಳೆಗಾಲದ ಕೊನೆಯ ದಿನಗಳಲ್ಲಿ ಅಂದರೆ ಆಗಸ್ಟ್ ತಿಂಗಳಲ್ಲಿ.

ಚಳಿಗಾಲ

ಅಕ್ಟೋಬರ್-ಫೆಬ್ರವರಿ ಚಳಿಗಾಲ. ಈ ಸಮಯದಲ್ಲಿ ಗರಿಷ್ಟ ಉಷ್ಣಾಂಶವು 28 ಡಿಗ್ರಿ ಸೆಲ್ಸಿಯಸ್ ಇರುತ್ತದೆ. ಕನಿಷ್ಟ 2 ಡಿಗ್ರಿ ಸೆಲ್ಸಿಯಸ್ಗೆ ಕೂಡ ಹೋಗಬಹುದು. ಚಳಿಗಾಲದಲ್ಲಿ ಚಳಿ ಹೆಚ್ಚಿದ್ದರೂ ಕೂಡ ವಾತಾವರಣವು ಆಹ್ಲಾದಕರವಾಗಿರುತ್ತದೆ. ಚಳಿಗಾಲ ಜಬಲ್ಪೂರದ ಪ್ರವಾಸಕ್ಕೆ ಸೂಕ್ತವಾದದ್ದು.