ದುಮ್ನಾ ಅಭಯಾರಣ್ಯವು ಜಬಲ್ಪೂರದಿಂದ 10 ಕಿಮೀ ದೂರದಲ್ಲಿದೆ. ಇದು ನಿಸರ್ಗ ಮತ್ತು ಪ್ರಾಣಿಪ್ರಿಯರಿಗೆ ನೆಚ್ಚಿನ ತಾಣ. ಇದು ದುಮ್ನಾ ವಿಮಾನ ನಿಲ್ದಾಣದ ಹಾದಿಯಲ್ಲಿದೆ. ಇದು 1058 ಹೆಕ್ಟೇರ್ ಪ್ರದೇಶದಲ್ಲಿದೆ. ಇಲ್ಲಿ ವಿವಿಧ ಜಾತಿಯ ವನ್ಯಮೃಗಗಳನ್ನು ಕಾಣಬಹುದು. ಇಲ್ಲಿಗೆ ಭೇಟಿ ನೀಡಲು ಅರಣ್ಯಾಧಿಕಾರಿಗಳ ಅನುಮತಿ ತೆಗೆದುಕೊಂಡಿರಬೇಕು. ಇಲ್ಲಿ ಹಲವು ರೀತಿಯ ಪಕ್ಷಿಗಳು, ಜಿಂಕೆಗಳು, ನರಿಗಳು, ಮುಳ್ಳುಹಂದಿ ಮತ್ತು ಕೋತಿಗಳನ್ನು ಕಾಣಬಹುದು. ಮಧ್ಯಪ್ರದೇಶ ಸರ್ಕಾರವು ಇದನ್ನು ಇನ್ನಷ್ಟು ಜನಪ್ರಿಯಗೊಳಿಸಲು ಇಲ್ಲಿ ಚಾರಣ, ಮೀನು ಷಿಕಾರಿ, ಕ್ಯಾಂಪಿಗ್ಗಳನ್ನು ಪರಿಚಯಿಸಿದೆ. ಆದರೆ ದುಮ್ನಾಕೆರೆಯಲ್ಲಿ ಈಜುವುದು ನಿಷಿದ್ಧ.


Click it and Unblock the Notifications