Search
  • Follow NativePlanet
Share
ಮುಖಪುಟ » ಸ್ಥಳಗಳು » ಇಟಾನಗರ » ಆಕರ್ಷಣೆಗಳು » ಇಟಾನಗರದ ಜವಾಹರಲಾಲ್ ನೆಹರು ಸಂಗ್ರಹಾಲಯ

ಇಟಾನಗರದ ಜವಾಹರಲಾಲ್ ನೆಹರು ಸಂಗ್ರಹಾಲಯ, ಇಟಾನಗರ

20

ಪ್ರಪಂಚದಾದ್ಯಂತದ ಸಂಗ್ರಹಾಲಯಗಳು ವಿಜ್ಞಾನ, ಸಾಂಪ್ರದಾಯಿಕ, ಮತ್ತು ಇತಿಹಾಸಕ್ಕೆ ಸಂಬಂಧಿಸಿದ ವಸ್ತುಗಳ ಸಂರಕ್ಷಣೆಗೆ ಮೀಸಲಾಗಿವೆ.  ಆರುಣಾಚಲಪ್ರದೇಶದ ಇಟಾನಗರದಲ್ಲಿರುವ ಜವಾಹರಲಾಲ್ ನೆಹರು ಸಂಗ್ರಹಾಲಯವು ಅಂಥದ್ದೇ ಒಂದು ಸಂಗ್ರಹಾಲಯ.  ಇದು 1980 ರಲ್ಲಿ ಸ್ಥಾಪಿತಗೊಂಡಿದ್ದು, ಇದು ರಾಜ್ಯದ ಬುಡಕಟ್ಟು ಜನಾಂಗದ ವಸ್ತುಗಳ ಸಂಗ್ರಹಕ್ಕೆ ಮೀಸಲಾಗಿದೆ.  ಇಲ್ಲಿ ಸಂಗ್ರಹಿಸಿರುವ ವಸ್ತುಗಳ ಮೂಲಕ ಪ್ರವಾಸಿಗರು ಈ ಪ್ರದೇಶದ ಜನರ ಜೀವನಶೈಲಿ ಮತ್ತು ಸಂಸ್ಕೃತಿಯ ಬಗ್ಗೆ ತಮ್ಮ ಮನಃ ಪಟದಲ್ಲಿ ಚಿತ್ರಣವನ್ನು ಮೂಡಿಸಿಕೊಳ್ಳಬಹುದು.

ಉಡುಗೆತೊಡುಗೆ, ಆಯುಧಗಳು, ಆಭರಣಗಳು, ತಲೆಯುಡುಗೆ, ಸಂಗೀತ ಪರಿಕರಗಳು, ಮತ್ತು ಕರಕುಶಲ ವಸ್ತುಗಳೊಂದಿಗೆ ಈ ಸಂಗ್ರಹಾಲಯವು ಐತಿಹಾಸಿಕ ಕರಕುಶಲ ವಸ್ತುಗಳ ಸೊಬಗನ್ನೂ ಹೊಂದಿದೆ.  ಇಲ್ಲಿನ ಅದ್ವಿತೀಯ ಮತ್ತು ಆಸಕ್ತಿದಾಯಕ ಸಂಗ್ರಹಕ್ಕಾಗಿ, ಈ ಸಂಗ್ರಹಾಲಯವು ಪ್ರಪಂಚದಾದ್ಯಂತ ಪ್ರವಾಸಿಗರನ್ನು ಆಕರ್ಷಿಸುತ್ತದೆ.

ಸಂಗ್ರಹಾಲಯದ ಮೂಲಕ ಕಾಣಬಹುದಾದ ಚಿತ್ರಸದೃಶ ನೋಟವು ಇಲ್ಲಿನ ಮರದ ಕೆತ್ತನೆಯ ಸೊಬಗು, ಗೃಹವಸ್ತುಗಳು, ಮತ್ತು ಉಡುಪುಗಳ ಮೇಲೆ ಬೆಳಕು ಚೆಲ್ಲುತ್ತದೆ.  ಕರಕುಶಲ ವಸ್ತುಗಳ ಕೇಂದ್ರದ ವತಿಯಿಂದ ನಡೆಸಲ್ಪಡುವ ಕಾರ್ಯಾಗಾರವು ಬಿದಿರಿನಂತಹ ವಸ್ತುಗಳ ಉತ್ಪನ್ನಗಳಲ್ಲಿ ಪರಿಣತಿಯನ್ನು ಪಡೆದಿದೆ.  ಇಲ್ಲಿರುವ ಮಾಹಿತಿಪೂರ್ಣ ಗ್ರಂಥಾಲಯವು ವ್ಯಕ್ತಿಯೋರ್ವನ ಜ್ಞಾನ ವಿಸ್ತರಣೆಗೆ ಸಹಾಯವಾಗಬಲ್ಲುದು.

ಜವಾಹರಲಾಲ್ ನೆಹರುರವರ ಎದೆಮಟ್ಟದ ಮೂರ್ತಿಯು ಪ್ರಾವಾಸಿಗರನ್ನು ಪ್ರವೇಶದ್ವಾರದಲ್ಲಿ ಸ್ವಾಗತಿಸುತ್ತದೆ.  ಸಂಗ್ರಹಾಲಯದ ನೆಲ ಅಂತಸ್ತಿನಲ್ಲಿ, ಸಂಗೀತ ಪರಿಕರಗಳು, ಸಾಂಪ್ರದಾಯಿಕ ಕಲೆ, ಕರಕೌಶಲ್ಯ, ಮತ್ತು ಧಾರ್ಮಿಕತೆಗೆ ಸಂಭಂದಿಸಿದ ವಸ್ತುಗಳನ್ನು ಕಾಣಬಹುದು.  ಕರಕುಶಲ ವಸ್ತುಗಳು ಮುಖ್ಯವಾಗಿ ಪ್ರಾದೇಶಿಕ ಮರದ ಕೆತ್ತನೆಗಳ ಮತ್ತು ಬಿದಿರಿನ ಉತ್ಪನ್ನಗಳನ್ನು ಹೊಂದಿವೆ.  ಮೊದಲನೆಯ ಅಂತಸ್ತಿನಲ್ಲಿ, ಇಟಾ ಕೋಟೆ, ಮಲಿನಿತನ್ ಮತ್ತು ಪಶ್ಚಿಮ ಸಿಯಾಂಗ್ ಜಿಲ್ಲೆಯ ನೊಕ್ಸ್ ಪರ್ಬತ್ ನಲ್ಲಿ ದೊರೆತ ಐತಿಹಾಸಿಕ ವಸ್ತುಗಳಿವೆ.  ಸಂಗ್ರಹಾಲಯದ ಮಾರಾಟ ಮಳಿಗೆಗಳು ಬುಡಕಟ್ಟು ವರ್ಗಕ್ಕೆ ಸೇರಿದ ವಸ್ತುಗಳನ್ನು ಮಾರಾಟಕ್ಕೆ ಇರಿಸಿದ್ದು, ಪ್ರವಾಸಿಗರು, ತಮ್ಮ ಪ್ರವಾಸದ ಸವಿನೆನಪಿಗಾಗಿ ಇವುಗಳನ್ನು ಖರೀದಿಸಬಹುದು.

ಜವಾಹರಲಾಲ್ ನೆಹರು ವಸ್ತುಸಂಗ್ರಹಾಲಯವು 2011 ರಿಂದ ತಾಪಿ ಮ್ರಾ ರವರ ಸಾಹಸ ಯಾತ್ರೆಯ ಇಡೀ ಚಿತ್ರಣವನ್ನು ಹೆಮ್ಮೆಯಿಂದ ಪ್ರದರ್ಶಿಸುತ್ತದೆ.  ಮೌಂಟ್ ಎವರೆಸ್ಟ್ ಏರಿದ ಅರುಣಾಚಲಪ್ರದೇಶದ ಪ್ರಪ್ರಥಮ ವ್ಯಕ್ತಿ ಈತನು.

One Way
Return
From (Departure City)
To (Destination City)
Depart On
11 Mar,Wed
Return On
12 Mar,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
11 Mar,Wed
Check Out
12 Mar,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
11 Mar,Wed
Return On
12 Mar,Thu