ಮಣಿಪುರಿಯ ಹೆಮ್ಮೆಯ ಸ್ಥಾನ ಕಾಂಗ್ಲಾ ಅರಮನೆ 17 ನೇ ಶತಮಾನದಿಂದ ಪ್ರಬಲವಾಗಿ ನಿಂತಿದೆ. ಕಾಂಗ್ಲಾ, ಮೈತೆಯಿ ಪದದಿಂದ ವ್ಯುತ್ಪತ್ತಿಯಾಗಿದ್ದು ಈ ಪದದ ಅರ್ಥ 'ಒಣ ಭೂಮಿ'. ಸಾಮಾನ್ಯವಾಗಿ ಕಾಂಗ್ಲಾ ಕೋಟೆ ಎಂದು ಪ್ರಸಿದ್ಧವಾಗಿರುವ ಕಾಂಗ್ಲಾಅರಮನೆಯ ಇಂಫಾಲ ನದಿಯ ತೀರದಲ್ಲಿದೆ ಮತ್ತು ಇದನ್ನು ಒಂದು ಕೋಟೆಯ ನಗರ ಎಂದೂ ವಿವರಿಸಬಹುದು.
ಈಗ ಇದು ಪಾಳು ಬಿದ್ದಿದ್ದರೂ ಕೂಡ ಹಿಂದೆ ಪ್ರಮುಖ ರಾಜಕೀಯ ಮತ್ತು ಧಾರ್ಮಿಕ ಪ್ರಾಮುಖ್ಯತೆಯನ್ನು ಪಡೆದಿತ್ತೆಂದು ಊಹಿಸುವುದೆ ಕಷ್ಟ. ಕಾಂಗ್ಲಾ ಅರಮನೆಯು ಮಣಿಪುರವನ್ನು ಆಳಿದ ಮೈತೆಯಿ ರಾಜರ ಪೀಠವಾಗಿ ಕಾರ್ಯ ನಿರ್ವಹಿಸಿತ್ತು.ದಿಗ್ಭ್ರಮೆಯುಂಟುಮಾಡುವ ಇಟ್ಟಿಗೆಯ ಗೋಡೆಗಳು ಕ್ರಿ.ಶ. 1632 ಚೀನೀ ಕೈದಿಗಳ ಸೆರೆಹಿಡಿಯಲಾದ್ದ ಒಂದು ಭದ್ರ ಜೈಲಾಗಿ ಕಾರ್ಯನಿರ್ವಹಿಸಿತ್ತು.
ಮಣಿಪುರಿ ರಾಜರು 1891 ರಲ್ಲಿ ನಡೆದ ಆಂಗ್ಲೋ ಮಣಿಪುರ ಯುದ್ಧದಲ್ಲಿ ಬ್ರಿಟಿಷರಿಂದ ಸೋತ ನಂತರ ಈ ಕೋಟೆಯನ್ನು ಭದ್ರತಾ ಪಡೆಗಳು ಆಕ್ರಮಿಸಿಕೊಂಡವು. ಸ್ವಾತಂತ್ರ್ಯದ ನಂತರವೂ ಕೂಡ, ಅಸ್ಸಾಂ ರೈಫಲ್ಸ್, 2004ರಲ್ಲಿ ಕೋಟೆಯನ್ನು ದು ರಾಜ್ಯಸರ್ಕಾರಕ್ಕೆ ಹಸ್ತಾಂತರಿಸುವವರೆಗೂ ತಮ್ಮ ಹಿಡಿತದಲ್ಲಿರಿಸಿಕೊಂಡಿದ್ದರು.


Click it and Unblock the Notifications