ಸಮುದ್ರ ಮಟ್ಟದಿಂದ 3125 ಮೀಟರ್ ಎತ್ತರದಲ್ಲಿರುವ ಪಲ್ಕುಳಮೆಡು ಶಿಕರ ಇಡುಕ್ಕಿಯ ಅತ್ಯಂತ ರಮಣೀಯ ಸ್ಥಳಗಳಲ್ಲಿ ಒಂದಾಗಿದೆ. ಇಡುಕ್ಕಿಯಿಂದ 12 ಕಿ.ಮೀ. ಅಂತರದಲ್ಲಿ ಈ ಪ್ರದೇಶವಿದೆ. ಒಂದೆಡೆ ಕಣಿವೆ ಮತ್ತೊಂದೆಡೆ ಗಿರಿ ಶಿಕರಗಳು ಇಲ್ಲಿಗೆ ಪ್ರವಾಸಿಗರನ್ನು ಸೆಳೆಯುವ ಸೂಜಿಗಲ್ಲುಗಳು. ಚಾರಣ ಪ್ರಿಯರಿಗೆ ಈ ಪ್ರದೇಶ ಸ್ವರ್ಗ ಸದೃಶವಾದದ್ದು. ನೀವು ಛಾಯಾಗ್ರಹಣ ಪ್ರಿಯರಾಗಿದ್ದರಂತೂ ಇಲ್ಲಿ ವಿಫುಲವಾದ ಅವಕಾಶಗಳಿವೆ. ಇಲ್ಲಿಯ ಸೌಂದರ್ಯವನ್ನು ನೀವು ನೋಡುವ ಜತೆಗೆ ಇತರರೊಂದಿಗೂ ಹಂಚಿಕೊಳ್ಳಬಹುದು. ವರ್ಷದ ಯಾವುದೇ ದಿನ ಬೇಕಾದರೂ ಇಲ್ಲಿಗೆ ಬರಬಹುದು, ಮಳೆಗಾಲವಾಗಿದ್ದರೆ ನಿಮ್ಮ ಕೆಮರಾ, ಮತ್ತಿತರ ಗ್ಯಾಜೆಟ್ಟುಗಳು ಜೋಪಾನ!


Click it and Unblock the Notifications