ಕುಳಮಾವು ಗಿರಿಧಾಮ ಇಡುಕ್ಕಿ ಜಿಲ್ಲೆಯ ಇನ್ನೊಂದು ಪ್ರೇಕ್ಷಣೀಯ ಸ್ಥಳ. ಸಮುದ್ರ ಮಟ್ಟಕಿಂತ 3,000 ಅಡಿ ಮೇಲಿರುವ ಕಾರಣ ಪ್ರವಾಸಿಗರನ್ನು ಹೆಚ್ಚಾಗಿ ಆಕರ್ಷಿಸುತ್ತದೆ. ಇದು ಚಾರಣ ಪ್ರಿಯರಿಗೆ ಹೇಳಿ ಮಾಡಿಸಿದಂಥ ಸ್ಥಳ. ಇಡುಕ್ಕಿ ಜಲಾಶಯ ಯೋಜನೆಗಳಲ್ಲಿ ಕುಳಮಾವು ಅಣೆಕಟ್ಟೂ ಕೂಡ ಒಂದು. ಕುಳಮಾವು ಜಲಾಶಯವು 33 ಕಿ.ಮಿ ದೂರದಷ್ಷು ಕಲ್ಲಿನ ಪರ್ವತ ಮಧ್ಯ ಹಾದುಹೋಗಿರುವುದರಿಂದ ಜನಾಕರ್ಷಣೆಯ ಕೇಂದ್ರಬಿಂದುವಾಗಿದೆ. ಕುಳಮಾವು ಅಣೆಕಟ್ಟು ಮತ್ತು ಛೆರುಥೋಣಿಯ ನಡುವಿನ ಜಲಶಾಯಕ್ಕೆ ದೋಣಿ ಸಂಚಾರ ವ್ಯವಸ್ಥೆ ಕಲ್ಪಸಿ ಕೊಡಲಾಗಿದೆ. ಇದರ ಸಮೀಪವೇ ಮುಲಮಟಂ ನೆಲಮಾಳಿಗೆ ವಿದ್ಯುದಾಗಾರವನ್ನೂ ಕಾಣಬಹುದು. ಕುಳಮಾವಿನಿಂದ ಇಡುಕ್ಕಿ ವನ್ಯಜೀವಿಧಾಮಕ್ಕೆ ಭೇಟಿಕೊಡಬಹುದು. ಹೆಸರಾಂತ ನಡುಕಿಣಿ ಘಟ್ಟವು ಕುಳಮಾವುನಿಂದ 70 ಕಿ.ಮಿ. ದೊರದಲ್ಲಿದೆ.


Click it and Unblock the Notifications