Search
  • Follow NativePlanet
Share
ಮುಖಪುಟ » ಸ್ಥಳಗಳು » ಇಡುಕ್ಕಿ » ಆಕರ್ಷಣೆಗಳು » ಕಳಾವರಿ ಪರ್ವತ

ಕಳಾವರಿ ಪರ್ವತ, ಇಡುಕ್ಕಿ

1

ಜಿಲ್ಲಾ ಕೇಂದ್ರ ಇಡುಕ್ಕಿಯಿಂದ ಕಟ್ಟಪ್ಪಾನ ರಸ್ತೆಯಲ್ಲಿ ಸಾಗಿದರೆ ಕೇವಲ 5 ಕಿ.ಮೀ ಗಳಷ್ಟು ಅಂತರದಲ್ಲಿ ಬಾನೆತ್ತರಕ್ಕೆ ಬೆಳೆದು ನಿಂತಿರುವುದು ಕಳಾವರಿ ಪರ್ವತ. ಇದು ಅತ್ಯಂತ ಕಡಿದಾದ ಇಳಿಜಾರುಗಳಿಂದ ಕೂಡಿದೆ. ಪ್ರವಾಸಿಗರ ಪಾಲಿಗೆ ಇದು ಹಾಟ್‌ ಸ್ಫಾಟ್! ಗುಡ್‌ಪ್ರೈಡೇಯ ಮೆರವಣಿಗೆಯ ದೃಶ್ಯಾವಳಿ ಈ ಪ್ರದೇಶಕ್ಕೆ ಪ್ರಸಿದ್ಧಿಯನ್ನು ತಂದುಕೊಟ್ಟಿದೆ. ಏಪ್ರಿಲ್‌ ಮತ್ತು ಮಾರ್ಚ್ ತಿಂಗಳಲ್ಲಿ ನಡೆಯುವ ಈ ಮೆರವಣಿಗೆ ಜೀಸಸ್ ಕ್ರೈಸ್ತನನ್ನು ಶಿಲುಬೆಗೇರಿಸಲು ಶಿಲುಬೆಗಳನ್ನು ಒಯ್ಯುತ್ತಿದ್ದ ಸಂದರ್ಭದ ನೆನಪಲ್ಲಿ ನಡೆಯುತ್ತದೆ. ಸಾವಿರಾರು ಭಕ್ತರು ಇದರಲ್ಲಿ ಪಾಲ್ಗೊಳ್ಳುತ್ತಾರೆ. ಇದೇ ಸ್ಥಳದಿಂದ ನೀವು ಅಯ್ಯಪ್ಪಾಂಕೋವಿಲ್‌  ಮತ್ತು ಇಡುಕ್ಕಿ ಕಮಾನು ಅಣೆಕಟ್ಟನ್ನು  ನೋಡಬಹುದು. ಮತ್ತೊಂದೆಡೆ ತಿರುಗಿದರೆ ಕಾಮಾಕ್ಷಿ ಮತ್ತು ಮರಿಯಾಪುರಂ ಹಳ್ಳಿಗಳನ್ನು ಕಣ್ತುಂಬಿಸಿಕೊಳ್ಳಬಹುದು.

ಕಳಾವರಿ ಬೆಟ್ಟ ಚಾರಣ ಮತ್ತು ಪಿಕ್‌ನಿಕ್ ಗಳಿಗೆ ಹೇಳಿ ಮಾಡಿಸಿದಂಥ ಸ್ಥಳ. ವಾರಾಂತ್ಯದ ರಜೆಯನ್ನು ಇಲ್ಲಿ ಆರಾಮಾಗಿ ಕಳೆದು ಮನಸ್ಸನ್ನು ಪ್ರಫುಲ್ಲಗೊಳಿಸಿಕೊಳ್ಳಬಹುದು. ಚಾರಣ ಹೊರಟಾಗ ಆನೆಗಳನ್ನು ಹತ್ತಿರದಿಂದ ನೋಡಬಹುದು. ಸುಯ್ಯನೆ.. ಬೀಸುವ ಗಾಳಿ, ಹಕ್ಕಿಗಳ ಚಿಲಿಪಿಲಿ ನಿಮ್ಮನ್ನು ಸಮ್ಮೋಹನಗೊಳಿಸುತ್ತದೆ. ಇದೇ ಪ್ರದೇಶದ ಆಸುಪಾಸಿನಲ್ಲಿ ರಾತ್ರಿ ತಂಗಲು ಸಣ್ಣ ಪುಟ್ಟ ಗುಡಿಸಲುಗಳು ಲಭ್ಯವಿದ್ದು, ಪ್ರವಾಸಿಗರಿಗೆ ಮತ್ತಷ್ಟು ಅನುಕೂಲವಾಗಿದೆ.

One Way
Return
From (Departure City)
To (Destination City)
Depart On
11 Mar,Wed
Return On
12 Mar,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
11 Mar,Wed
Check Out
12 Mar,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
11 Mar,Wed
Return On
12 Mar,Thu