ಗಂಗೋತ್ರಿ ರಾಷ್ಟ್ರೀಯ ಉದ್ಯಾನ, ಈ ಪ್ರದೇಶದ ಹತ್ತಿರದಲ್ಲಿರುವ ಭೇಟಿ ನೀಡಲೇ ಬೇಕಾದ ಒಂದು ಉದ್ಯಾನವಾಗಿದೆ. ಇದು ಹರಸಿಲ್ ಹಳ್ಳಿಯಿಂದ 30 ಕಿ.ಮೀ ದೂರದಲ್ಲಿದೆ ಹಾಗೂ 1553 ಚದರ ಕಿಲೋಮೀಟರ್ ವಿಸ್ತಾರವಾಗಿದೆ. ಇದು 15 ತಳಿಯ ಪ್ರಾಣಿಗಳು ಮತ್ತು 15 ತಳಿಯ ಪಕ್ಷಿಗಳಿಗೆ ಮನೆಯಾಗಿದೆ. ಪ್ರವಾಸಿಗರು ಇಲ್ಲಿ ಹಿಮ ಚಿರತೆ, ಕಂದು ಕರಡಿಗಳು, ಕಸ್ತೂರಿ ಮೃಗ, ಥಾರ್ಸ್, ಹಿಮಾಲಯದ ಕ್ರುಟ ಹಕ್ಕಿಗಳು, ಹುಲಿಗಳು, ಸೆರೊವ್ ಗಳು, ಲಾವಗೆಗಳು, ಪಾಟ್ರಿಜ್ ಗಳು, ಕೊಕ್ಲಾಸ್, ಭರಲ್ಸ್, ಹಿಮಾಲಯದ ಮೊನಲ್ಸ್ ಗಳು, ಪಾರಿವಾಳಗಳು ಮತ್ತು ಗಿಣಿಗಳನ್ನು ಕಾಣಬಹುದಾಗಿದೆ.


Click it and Unblock the Notifications