ಧಾರಾಲಿ ಹರಸಿಲ್ ನಿಂದ ಸುಮಾರು 3 ಕಿ.ಮೀ ದೂರದಲ್ಲಿರುವ ಹಳ್ಳಿಯಾಗಿದೆ. ಇದು ಗಂಗಾ ನದಿಯ ತಟದಲ್ಲಿ ಇದ್ದು, ಹಚ್ಚ ಹಸಿರಿನ ದೇವದಾರು ಮರಗಳಿಂದ ಆವೃತವಾಗಿದೆ. ಇಲ್ಲಿ ಕೆಂಪು ಬೀನ್ ಮತ್ತು ಸೇಬು ಹಣ್ಣಿನ ತೋಟಗಳನ್ನು ಕಾಣಬಹುದು. ಇಲ್ಲಿಂದ ಹಲವಾರು ಹಿಮದಿಂದ ಆವೃತವಾದ ಶಿಖರಗಳನ್ನು ಕಾಣಬಹುದಾಗಿದೆ. ಇಲ್ಲಿರುವ ಹಳೆಯ ಕಾಲದ ಶಿವ ದೇವಸ್ಥಾನದ ಕಾರಣದಿಂದಾಗಿ ಇದು ಪ್ರಸಿದ್ಧವಾಗಿದೆ. ಈ ದೇವಸ್ಥಾನದ ವಾಸ್ತುಶಿಲ್ಪ ಕೇದಾರನಾಥ ದೇವಾಲಯದ ವಾಸ್ತುಶಿಲ್ಪಕ್ಕೆ ಸಮಾನವಾಗಿದೆ. ಮುಕಿಮಠ ದೇವಸ್ಥಾನ ಗಂಗೋತ್ರಿ, ತಪೋವನ, ವಾಸುಕಿ ತಾಲ್, ಗಂಗ್ನೈ ಮತ್ತು ಛಿರ್ಬಾಸಾ ಇಲ್ಲಿನ ಕೆಲವು ಪ್ರವಾಸಿ ಆಕರ್ಷಣೆಗಳಾಗಿವೆ.


Click it and Unblock the Notifications