ಹರ್ ಕೀ ಪೌರಿ ಯಿಂದ 5 ಕಿ.ಮೀ ದೂರದಲ್ಲಿ ನೆಲೆಗೊಂಡಿರುವ ಸಪ್ತ ಋಷಿ ಆಶ್ರಮ, ಹರಿದ್ವಾರದ ಪ್ರಖ್ಯಾತ ಆಧ್ಯಾತ್ಮಿಕ ಪರಂಪರೆಯ ತಾಣಗಳಲ್ಲಿ ಒಂದಾಗಿದೆ. ಒಂದು ಹಿಂದೂ ಜಾನಪದ ಪ್ರಕಾರ, ಈ ಆಶ್ರಮದಲ್ಲಿ ವೇದಗಳ ಕಾಲದ ಸಪ್ತರ್ಷಿಗಳಾದ ಅತ್ರಿ, ಕಷ್ಯಪ, ಜಮದಗ್ನಿ, ಭಾರದ್ವಾಜ, ವಸಿಷ್ಠ, ವಿಶ್ವಾಮಿತ್ರ ಮತ್ತು ಗೌತಮ ಋಷಿ ಮುನಿಗಳು ಧ್ಯಾನ ಮಾಡುತ್ತಿದ್ದರು ಎನ್ನಲಾಗುತ್ತದೆ.
ಪುರಾಣಗಳ ಪ್ರಕಾರ, ಗಂಗಾ ನದಿಯು ಇಲ್ಲಿ ತಾನೆ ಸ್ವತಃ ಏಳು ಕವಲುಗಳಾಗಿ ವಿಂಗಡಣೆಗೊಂಡಿತು. ಇದರಿಂದಾಗಿ ಋಷಿಗಳು ಹರಿವಿನ ಅಡಚಣೆಯಿಲ್ಲದೆ ಧ್ಯಾನ ಮಾಡುತ್ತಿದ್ದರು. ನಂತರ ಗಂಗೆಯ ಈ ಏಳು ಕವಲುಗಳು ಭವ್ಯವಾದ ನದಿಯಾಗಿ ನೀಲ್ ಧಾರಾ ಎಂದು ಪ್ರಸಿದ್ಧವಾದ ಕಾಲುವೆಯಾಗಿ ಒಟ್ಟಾಗಿ ಸೇರಿಕೊಳ್ಳುತ್ತದೆ.


Click it and Unblock the Notifications