ಮಾನಸ ದೇವಿ ದೇವಾಲಯ, ಒಂದು ಜನಪ್ರಿಯ ಧಾರ್ಮಿಕ ಸ್ಥಳವಾಗಿದೆ. ಹರಿದ್ವಾರ ನಗರದಿಂದ ಸುಮಾರು 3 ಕಿಮೀ ದೂರದಲ್ಲಿ ಇದೆ. ದೇವಾಲಯವು, ಪುರಾತನ ವೇದ ಕಾಲದ ಮಹಾನ್ ಋಷಿ ಮುನಿ ಕಶ್ಯಪ ನ ಮಾನಸ ಪುತ್ರಿ ಹಿಂದೂ ದೇವತೆ, ಮಾನಸ ದೇವಿಗೆ ಸಮರ್ಪಿತವಾಗಿದೆ. ಈ ದೇವತೆ ಸರ್ಪಗಳ ರಾಜ ನಾಗ ವಾಸುಕಿಯ ಪತ್ನಿಯಾಗಿದ್ದಳು.
ದೇವಾಲಯವು ಶಿವಾಲಿಕ್ ಬೆಟ್ಟಗಳಲ್ಲಿ ಬಿಲ್ವ ಪರ್ವತದ ತಪ್ಪಲಿನಲ್ಲಿ ತಪಸ್ಸಿಗೆ ಕುಳಿತಿರುವ ಎರಡು ವಿಗ್ರಹಗಳನ್ನು ಹೊಂದಿದೆ. ಈ ವಿಗ್ರಹಗಳ ಪೈಕಿ ಒಂದು ಎಂಟು ತೋಳುಗಳನ್ನು ಒಳಗೊಂಡಿದೆ. ಇನ್ನೊಂದು, ಐದು ಬಾಹುಗಳು ಮತ್ತು ಮೂರು ಬಾಯಿಗಳನ್ನು ಹೊಂದಿದೆ.
52 ಶಕ್ತಿ ಪೀಠಗಳು (ಹಿಂದೂ ದೇವತೆ ಸತಿ ಅಥವಾ ಶಕ್ತಿಯಿಂದ ಪಾವನಗೊಂಡ ಪೂಜಾ ಸ್ಥಳ) ಈ ದೇವಸ್ಥಾನದ ಒಂದು ಸಿದ್ಧ ಪೀಠಗಳಲ್ಲಿ ತ್ರಿಕೋಣದ ಉತ್ತುಂಗದಲ್ಲಿ ಕಾಣಬಹುದು. ತ್ರಿಕೋನದಲ್ಲಿ ಮಾಯಾ ದೇವಿ, ಚಂಡಿ ದೇವಿ ಮತ್ತು ಮಾನಸ ದೇವಿ ಈ ಮೂರು ದೇವಾಲಯಗಳನ್ನೂ ಕಾಣಬಹುದು. ಈ ದೇವಸ್ಥಾನಕ್ಕೆ ಭೇಟಿ ನೀಡಿದಾಗ, ಭಕ್ತರು ತಮ್ಮ ಇಚ್ಛೆ ಪೂರೈಸಿಕೊಡೆಂದು ದೇವತೆಗೆ ಹರಕೆ ಹೊತ್ತು, ಇಲ್ಲಿನ ಪವಿತ್ರ ಮರದ ಸುತ್ತಲೂ ದಾರವನ್ನು ಕಟ್ಟುತ್ತಾರೆ. ಹಾರೈಕೆ ಪೂರ್ಣಗೊಂಡ ನಂತರ, ಮರದಿಂದ ಈ ದಾರವನ್ನು ಬಿಚ್ಚಬೇಕು. ಪ್ರವಾಸಿಗರು ಕೇಬಲ್ ಕಾರ್ ಮೂಲಕ, 'ದೇವಿ ಉಡನ್ ಕಟೋಲಾ’ ಎಂದು ಜನಪ್ರಿಯವಾಗಿರುವ ದೇವಸ್ಥಾನವನ್ನು ತಲುಪಬಹುದು.