Search
  • Follow NativePlanet
Share
ಮುಖಪುಟ » ಸ್ಥಳಗಳು » ಹರಿದ್ವಾರ » ಆಕರ್ಷಣೆಗಳು » ಹರ್ ಕೀ ಪೌರಿ

ಹರ್ ಕೀ ಪೌರಿ, ಹರಿದ್ವಾರ

4

ಬ್ರಹ್ಮ ಕುಂಡ್ ಎಂದು ಪ್ರಸಿದ್ಧವಾಗಿರುವ ಹರ್ ಕೀ ಪೌರಿ, ಹರಿದ್ವಾರದ ಅತ್ಯಂತ ಪವಿತ್ರ ಮತ್ತು ಜನಪ್ರಿಯ ಸ್ಥಳ ಎಂದು ಪರಿಗಣಿಸಲಾಗುತ್ತದೆ. ಇದು ಗಂಗಾ ನದಿಯು ಪರ್ವತಗಳಲ್ಲಿ ಹುಟ್ಟಿ, ನಂತರ ಹರಿದು ಬಯಲು ಸೇರುವ ಸ್ಥಳವಾಗಿದೆ. ಇದನ್ನು ಪ್ರಸಿದ್ಧ ರಾಜ ವಿಕ್ರಮಾದಿತ್ಯ ತನ್ನ ಸಹೋದರನಾದ ಬ್ರಿತಹರಿಯು ಇಲ್ಲಿ ಧ್ಯಾನಿಸುತ್ತಿದ್ದರ ನೆನಪಿನಾರ್ಥವಾಗಿ ನಿರ್ಮಿಸಿದನು ಎನ್ನಲಾಗುತ್ತದೆ.

ಈ ಸ್ಥಳಕ್ಕೆ ಸಂಬಂಧಿಸಿದ ಹಲವು ದಂತಕಥೆಗಳಲ್ಲಿ ಒಂದರ ಪ್ರಕಾರ, ಹಿಂದೂ ಭಗವಾನ್ ಶಿವ ಮತ್ತು ವಿಷ್ಣು ವೈದಿಕ ಕಾಲದಲ್ಲಿ ಇಲ್ಲಿ ಕಾಣಿಸಿಕೊಂಡಿದ್ದರು. ಇತರ ಪುರಾಣಗಳ ಪ್ರಕಾರ, ಸೃಷ್ಟಿಕರ್ತ ಎಂದು ಕರೆಯಲ್ಪಡುವ ಬ್ರಹ್ಮದೇವನು, ಈ ಸ್ಥಳದಲ್ಲಿ ತ್ಯಾಗದ ಒಂದು ಆಚರಣೆಯಾದ 'ಯಜ್ಞ'ವನ್ನು ನಡೆಸಿದ್ದನು ಎಂದು ಹೇಳುತ್ತಾರೆ. ಘಟ್ಟಗಳಲ್ಲಿರುವ ಹೆಜ್ಜೆಗುರುತುಗಳನ್ನು ಭಗವಾನ್ ವಿಷ್ಣುವಿನದು ಎಂದೂ ಹೇಳಲಾಗುತ್ತದೆ.

ಈ ಹರ್ ಕೀ ಪೌರಿಯಿಂದ ನೀರಿನ ಒಂದು ಹನಿ ತೆಗೆದುಕೊಳ್ಳುವ ವ್ಯಕ್ತಿಯ ಎಲ್ಲಾ ಪಾಪಗಳೂ ನಶಿಸಿ ಹೋಗುತ್ತವೆ ಎಂದು ನಂಬಲಾಗಿದೆ. ದೊಡ್ಡ ಸಂಖ್ಯೆಯಲ್ಲಿ ಭಕ್ತರು ಇಲ್ಲಿಗೆ ಬಂದು 'ಮುಂಡನ್' (ತಲೆಯನ್ನು ಬೋಳಿಸಿಕೊಳ್ಳುವುದು) ಮತ್ತು 'ಉಪನಯನ' (ದೀಕ್ಷಾ ಆಚರಣೆಯ) ಮೊದಲಾದ ಆಚರಣೆಗಳನ್ನು ನಡೆಸಲು ಈ ಸ್ಥಳಕ್ಕೆ ಆಗಮಿಸುತ್ತಾರೆ. ಈ ಸ್ಥಳದಲ್ಲಿ ಪ್ರತಿ 12 ವರ್ಷಗಳ ಅವಧಿಯಲ್ಲಿ ನಡೆಯುವ 'ಕುಂಭ ಮೇಳ' ಕ್ಕೆ  ಅನೇಕ ಸಾವಿರಾರು ಭಕ್ತರು ಸಾಕ್ಷಿಯಾಗುತ್ತಾರೆ.

One Way
Return
From (Departure City)
To (Destination City)
Depart On
06 Sep,Sun
Return On
07 Sep,Mon
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
06 Sep,Sun
Check Out
07 Sep,Mon
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
06 Sep,Sun
Return On
07 Sep,Mon