ಎತ್ತರನೆಯ ಕಲ್ಲಿನ ಗೋಡೆಗಳಿಂದ ಸುತ್ತುರೆಯಾಗಿ ನಿರ್ಮಿಸಲಾದ ಜೆನಾನಾ ಎನ್ಕ್ಲೊಸರ್, ಹಂಪಿಯಲ್ಲಿ ಪ್ರವಾಸಿಸುವಾಗ ನೋಡಲೆ ಬೇಕಾದ ಒಂದು ಸ್ಥಳ. ಈ ಸ್ಥಳವು ಕೇವಲ ಮಹಿಳೆಯರ ಪ್ರವೇಶಕ್ಕೆ ಮಾತ್ರವಿದ್ದು, ಅವರ ಗೌಪ್ಯತೆಯನ್ನು ಕಾಪಾಡುವ ರೀತಿಯಲ್ಲಿ ನಿರ್ಮಿಸಲಾಗಿದೆ. ಇದರಲ್ಲಿ ನಾಲ್ಕು ಪ್ರಧಾನ ರಚನೆಗಳಿದ್ದು, ಅವುಗಳೇ ಮಹಾರಾಣಿ ಅರಮನೆ(ಕ್ವೀನ್ಸ್ ಪ್ಯಾಲೇಸ್), ಎರಡು ನಿರೀಕ್ಷಣಾ ಗೋಪುರಗಳು ಹಾಗು ಜನಪ್ರೀಯವಾದ ಲೊಟಸ್ ಮಹಲ್. ಈ ಕಟ್ಟಡಕ್ಕೆ ಅನೇಕ ಖಿಂಡಿಗಳಿದ್ದು, ರಾಣಿಯರ ಬೇಸಿಗೆ ಅರಮನೆಯಾಗಿತ್ತು. ಕ್ವೀನ್ಸ ಪ್ಯಾಲೇಸ್ 46*29 ಮೀ. ಅಳತೆ ಹೊಂದಿದ್ದು ಕಟ್ಟಿಗೆ ಹಾಗು ಇತರೆ ಸಾಮಗ್ರಿಗಳಿಂದ ನಿರ್ಮಿಸಲ್ಪಟ್ಟಿದೆ.ಇತಿಹಾಸಕಾರರ ಪ್ರಕಾರ, ಈ ಸ್ಥಳವು ಕೇವಲ ಮಹಿಳೆಯರಿಗಾಗಿ ಮಾತ್ರ ಮೀಸಲಾಗಿದ್ದುದರಿಂದ, ಇದರ ರಕ್ಷಣೆಯು ನಪುಂಸಕ ಸೈನಿಕರಿಂದ ಮಾಡಲ್ಪಡುತ್ತಿತ್ತು. ಉತ್ತರ ಹಾಗು ಆಗ್ನೇಯ ದಿಕ್ಕಿನಲ್ಲಿ ಕಟ್ಟಲಾದ ಎರಡು ಕಟ್ಟಡಗಳು ನಿರೀಕ್ಷಣಾ ಗೋಪುರಗಳಾಗಿ ನಿರ್ವಹಿಸಲ್ಪಡುತ್ತಿದ್ದವು. ಈ ಕಟ್ಟಡಗಳಿಂದ ಮಹಾರಾಣಿ ಹಾಗು ಆಕೆಯ ಕುಟುಂಬದ ಸದಸ್ಯರು ಹೊರಗೆ ನಡೆಯುತ್ತಿದ್ದ ಚಟುವಟಿಕೆಗಳನ್ನು ವಿಕ್ಷೀಸುತ್ತಿದ್ದರು. ಇಂಡೊ-ಇಸ್ಲಾಮಿಕ್ ಮಾದರಿಯ ವಾಸ್ತುಶಿಲ್ಪವುಳ್ಳ ಲೊಟಸ್ ಪ್ಯಾಲೇಸ್ ರಾಜ ಮಹಿಳೆಯರು ಸಂಧಿಸಿ ದಿನಕಳೆಯುವ ಸ್ಥಳವಾಗಿತ್ತು. ರಾಜಮನೆತನದ ಆನೆಗಳು ವಿರಮಿಸುತ್ತಿದ್ದ ಸ್ಥಳವಾದ ಎಲಿಫಂಟ್ ಸ್ಟೇಬಲ್ಸ್ ಇದರ ಹಿಂಬದಿಯಲ್ಲಿದ್ದು, ಪ್ರವಾಸಿಗರು ಭೇಟಿ ನೀಡಬಹುದು.


Click it and Unblock the Notifications