Search
  • Follow NativePlanet
Share
ಮುಖಪುಟ » ಸ್ಥಳಗಳು » ಹಂಪಿ » ಆಕರ್ಷಣೆಗಳು » ತುಂಗಭದ್ರ ನದಿ

ತುಂಗಭದ್ರ ನದಿ, ಹಂಪಿ

1

ತುಂಗಭದ್ರ, ದಕ್ಷಿಣ ಭಾರತದ ಒಂದು ದ್ವೀಪಕಲ್ಪಿತ ಪವಿತ್ರ ನದಿಯಾಗಿದ್ದು, ಕರ್ನಾಟಕದಿಂದ ಆಂಧ್ರಪ್ರದೇಶದವರೆಗೂ ಹರಿದಿದೆ. ಈ ನದಿಯ ದಕ್ಷಿಣಭಾಗದ ದಡದಲ್ಲಿ ಹಂಪಿಯಿದೆ. ತುಂಗಾ ಹಾಗು ಭದ್ರಾ ನದಿಗಳು ಸಮಾಗಮಗೊಂಡು ತುಂಗಭದ್ರಾ ನದಿಯು ರೂಪಗೊಂಡಿದೆ. ಜಲವಿದ್ಯುತ್ ಶಕ್ತಿ ಯೊಜನೆ ಅಡಿಯಲ್ಲಿ, ಬೄಹದಾಕಾರವಾದ ಆಣೆಕಟ್ಟನ್ನು(20 ಕಿ.ಮಿ ಹಂಪಿಯ ನೈರುತ್ಯಕ್ಕೆ) ಈ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ. ಅಂದಿನ ವಿಜಯನಗರದ ಕಾಲದಲ್ಲಿ, ಕಟ್ಟಡಗಳ ನಿರ್ಮಾಣಕ್ಕೆ ಹಾಗು ವಿವಿಧ ನೀರಾವರಿ ಯೋಜನೆಗಳಿಗೆ ಈ ನದಿಯ ನೀರನ್ನು ಬಳಸಲಾಗುತ್ತಿತ್ತು. ಅರಮನೆಯಲ್ಲಿ ಇರುವಂತಹ, ಮನುಷ್ಯ ನಿರ್ಮಿತ ಕೊಳಾಯಿಗಳಿಗೆ ನೀರನ್ನು ತಲುಪಿಸಲು ಉತ್ಕೄಷ್ಟ ಮಟ್ಟದ ನೀರು ಸರಬರಾಜು ವ್ಯವಸ್ಥೆಯನ್ನು ಇಲ್ಲಿ ಕಾಣಬಹುದಾಗಿದೆ. ಕೆಲವು ಪ್ರಾಚೀನ ಕಾಲುವೆಗಳನ್ನು ಇಂದಿಗೂ ಕೂಡ ಕೄಷಿ ನಿಮಿತ್ತ ಉದ್ದೇಶಗಳಿಗಾಗಿ ಬಳಸಲಾಗುತ್ತಿದೆ. ಈ ನದಿ ದಡವೂ ಕೂಡ ಹಂಪಿಯ ಜನಪ್ರೀಯ ಆಕರ್ಷಣೆಗಳಲ್ಲೊಂದಾಗಿದ್ದು ಪ್ರತಿ ವರ್ಷವು ಸಾವಿರಾರು ಪ್ರವಾಸಿಗರನ್ನು ಸೆಳೆಯುತ್ತಿದೆ.ತುಂಗಭದ್ರ ನದಿಯು ಮೊದಲು ಪಂಪಾ ಎಂಬ ಹೆಸರಿನಿಂದ ಕರೆಯಲ್ಪಡುತ್ತಿತ್ತು. ಇಲ್ಲಿರುವ ನಂಬಿಕೆಯ ಪ್ರಕಾರ, ಪಂಪಾ(ಬ್ರಹ್ಮನ ಪುತ್ರಿ) ಶಿವನಿಗೋಸ್ಕರ ಕಠಿಣವಾದ ತಪಸ್ಸನ್ನು ಆಚರಿಸಿದ್ದಳು. ಇದರಿಂದ ಪ್ರಸನ್ನನಾದ ಶಿವನು ಅವಳನ್ನು ಮದುವೆಯಾಗಿ ಪಂಪಾಪತಿ ಎಂಬ ಹೆಸರನ್ನು ಪಡೆದನು. ಹಂಪಿ ಎಂಬ ಹಸರೂ ಕೂಡ ಪಂಪಾಳ ಕಥೆಯಿಂದಲೇ ಬಂದುದಾಗಿದೆ. ತುಂಗಭದ್ರ ನದಿಗೆ ಭೇಟಿ ನೀಡುವ ಪ್ರವಾಸಿಗರು ಇಲ್ಲಿ ಅನೇಕ ಶಿವನ ವಿಗ್ರಹಗಳನ್ನು ನೋಡಬಹುದು.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed