ಧೋಪುರಗಿರಿ ಸತ್ರಾವನ್ನು ಮಧ್ವದೇವ ಸಂತರು ನಿರ್ಮಿಸಿದರು, ಇವರು ಶ್ರೀಮಂತ ಶಂಕರದೇವರ ಹಿಂಬಾಲಕರು. ಶ್ರೀಮಂತ ಶಂಕರದೇವ ಆಶ್ರಮದಲ್ಲಿ ಅಸ್ಸಾಂ ಸಂಸ್ಕ್ರುತಿಯ ಮುಖವಾಡದೊಂದಿಗೆ ವೈಷ್ಣವ ಧರ್ಮವನ್ನು ಜಾರಿಗೆ ತಂದರು. ಧೋಪುರಗಿರಿ ಸತ್ರಾವನ್ನು 1587ರಲ್ಲಿ ಕಟ್ಟಲಾಗಿತ್ತು.
ಮೊದಲಿಗೆ ಈ ಸತ್ರಾದಲ್ಲಿ ಬರೀ ಮೂರು ಕೊಠಡಿಗಳಿದ್ದವು, ಅದಾದ ನಂತರ ಸತ್ರಾಗೆ ಹೆಚ್ಚಿನ ರೂಂಗಳನ್ನು ನಿರ್ಮಾಣ ಮಾಡಲಾಯಿತು. ಈ ಸತ್ರಾದಲ್ಲಿ ಕೆಲವು ಪವಿತ್ರ ಸ್ಥಳಗಳಿವೆ ಅದರಲ್ಲಿ ಪ್ರಮುಖವಾಗಿ ಗೋಕರ್ಣ, ವಿಕರ್ಣ ಮತ್ತು ಸ್ವರ್ಗದ್ವಾರ್. ಸತ್ರಾ ಅಸ್ಸಾಮಿಗರ ವೈವಿಧ್ಯಮಯ ಸಂಸ್ಕ್ರುತಿಯನ್ನು ಆಚರಿಸುತ್ತದೆ ಅಲ್ಲದೇ ಸಾಮಾಜಿಕ ಸಂಸ್ಕ್ರುತಿಯನ್ನು ಬಿಂಬಿಸುವ ಹಲವು ಸಂಸ್ಥೆಗಳೂ ಆಶ್ರಮದ ಸುತ್ತ ಮುತ್ತ ಇವೆ. ಈ ಆಶ್ರಮ ಅತ್ಯಂತ ಘನವೆತ್ತ ಆಶ್ರಮವಾಗಿದೆ.
ಧೋಪುರಗಿರಿ ಸತ್ರಾ ಆಶ್ರಮವನ್ನು ಅಸ್ಸಾಂ ಮತ್ತು ದೇಶದ ಇತರ ಭಾಗಗಳಿಂದ ವರ್ಷಾದ್ಯಂತ ಇಲ್ಲಿಗೆ ಭೇಟಿ ನೀಡುತ್ತಾರೆ. ಶ್ರೀಮಂತ ಶಂಕರದೇವರ ಅಣತಿಯಂತೆ ಹಜೋದಲ್ಲಿರುವ ವೈಷ್ಣವ ಧರ್ಮವನ್ನು ಪ್ರತಿಪಾದಿಸುವ ಏಕೈಕ ಆಶ್ರಮ ಇದಾಗಿದೆ.


Click it and Unblock the Notifications