Search
  • Follow NativePlanet
Share
ಮುಖಪುಟ » ಸ್ಥಳಗಳು » ಗ್ವಾಲಿಯರ್ » ಆಕರ್ಷಣೆಗಳು » ಸಿಂಧಿಯ ವಸ್ತು ಸಂಗ್ರಹಾಲಯ

ಸಿಂಧಿಯ ವಸ್ತು ಸಂಗ್ರಹಾಲಯ, ಗ್ವಾಲಿಯರ್

0

ಸಿಂಧಿಯ ವಸ್ತು ಸಂಗ್ರಹಾಲಯವನ್ನು ಜೀವಜಿ ರಾವ ಸಿಂಧಿಯ ವಸ್ತು ಸಂಗ್ರಹಾಲಯ ಎಂದು ಸಹ ಕರೆಯಲಾಗುತ್ತದೆ. ಇದು ಜಯವಿಲಾಸ ಮಹಲ್ ಒಳಗಡೆ ಇದೆ.  ಜೀವಜಿ ರಾವ ಸಿಂಧಿಯ ಅವರ ನೆನೆಪಿಗಾಗಿ ಇದಕ್ಕೆ ಅವರ ಹೆಸರನ್ನು ಇಡಲಾಗಿದೆ. ಜೀವಜಿ ರಾವ ಅವರು ಸಿಂಧಿಯ ರಾಜವಂಶದ ಪ್ರಗತಿ ಪರ ದೊರೆಯಾಗಿದ್ದರು.  ಈ ವಸ್ತು ಸಂಗ್ರಹಾಲಯವನ್ನು 1964 ರಲ್ಲಿ ಟ್ರಸ್ಟವೊಂದು ಆರಂಭಿಸಿತು. ಇದನ್ನು  ಸಿಂಧಿಯಾ ರಾಜವಂಶದ ಉತ್ತರಾಧಿಕಾರಿಗಳು ಹೊಂದಿದ ಮತ್ತು ಅವರಲ್ಲಿ ಉಳಿದ ದಾಖಲೆಗಳನ್ನು ಮತ್ತು ಇತರ ಪ್ರಮುಖ  ವಸ್ತುಗಳನ್ನು ಪ್ರದರ್ಶಿಸುವ ಸಲುವಾಗಿ ಆರಂಭಿಸಲಾಯಿತು.

ಚಿತ್ರಗಳು, ಕಂಚುಗಳು, ಶಸ್ತ್ರಾಸ್ತ್ರಗಳು, ಶಿಲ್ಪಗಳು, ಹಸ್ತಪ್ರತಿಗಳು, ನಾಣ್ಯಗಳು, ಸಂಗೀತ ಉಪಕರಣಗಳು,  ಪರ್ಷಿಯನ್ ರತ್ನಗಂಬಳಿಗಳು, ಮಲಬಾರ್ ಮರದ ಕೆತ್ತನೆಗಳು  ಇತ್ಯಾದಿಗಳು  ಸೇರಿದಂತೆ ಅನೇಕ ವಸ್ತುಗಳನ್ನು ಇಲ್ಲಿ ಪ್ರದರ್ಶಿಸಲಾಗುತ್ತದೆ. ಇಟಲಿ, ಜಪಾನ, ಚೀನಾ ದೇಶಗಳ ಅಪರೂಪದ ಅಮೂಲ್ಯವಾದ ಪ್ರಾಚೀನ ವಸ್ತುಗಳನ್ನು ಇಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ. ಇಲ್ಲಿ ಎರಡು ದೊಡ್ದದಾದ ಬೆಲ್ಜಿಯಂನ ದೀಪಗುಚ್ಚಗುಳನ್ನು ನೋಡಬಹುದಾಗಿದೆ. ಇದು ಅನೇಕ ಟನ್‍ಗಳ ತೂಕವನ್ನು ಹೊಂದಿದ್ದು, ವಸ್ತು ಸಂಗ್ರಹಾಲಯದಲ್ಲಿ ತೂಗು ಹಾಕಲಾಗಿದೆ. ಇದು ಖಂಡಿತವಾಗಿಯೂ ನೋಡುಗನ ಮನಸ್ಸನ್ನು ಸೆಳೆಯುತ್ತದೆ. ಔರಂಗಜೇಬ, ಷಾಹಜಾನರ ಖಡ್ಗಗಳು ಸಹ ಇಲ್ಲಿ  ಇವೆ.

One Way
Return
From (Departure City)
To (Destination City)
Depart On
11 Mar,Wed
Return On
12 Mar,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
11 Mar,Wed
Check Out
12 Mar,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
11 Mar,Wed
Return On
12 Mar,Thu