ಈ ಹಾಥಿ ಪೂಲ, ಗ್ವಾಲಿಯರ್ ಕೋಟೆಯ ಪ್ರಮುಖ ಪ್ರವೇಶದ್ವಾರವಾಗಿದೆ. ಇದು ಕೋಟೆಯ ಆರು ಪ್ರವೇಶ ದ್ವಾರಗಳನ್ನು ದಾಟಿದ ಮೇಲೆ ಇದನ್ನು ಪ್ರವೇಶಿಸಬಹುದಾಗಿದೆ. ಹಾಥಿ ಪೂಲ ಇದು ಏಳನೇಯ ಮತ್ತು ಮುಖ್ಯ ದ್ವಾರವಾಗಿದ್ದು ಇದರ ನಂತರ ನಾವು ಗ್ವಾಲಿಯರ್ ಕೋಟೆಯನ್ನು ಪ್ರವೇಶಿಸಬಹುದಾಗಿದೆ. ಈ ದ್ವಾರದ ಮೂಲಕವಾಗಿ ರಾಜ ಮಾನ ಸಿಂಗನು ನಿರ್ಮಿಸಿದ ಮಾನ ಮಂದಿರ ಅರಮನೆಯನ್ನು ನೇರವಾಗಿ ಪ್ರವೇಶಿಸಬಹುದು.
ಗ್ವಾಲಿಯರ್ ಕೋಟೆಯ ಈ ಪ್ರವೇಶ ದ್ವಾರದಲ್ಲಿ ಜೀವಂತ ಆನೆ ಗಾತ್ರದ ಒಂದು ದೊಡ್ಡದಾದ ಕಲ್ಲು ಇತ್ತು ಎಂದು ಹೇಳಲಾಗುತ್ತದೆ. ಈ ಕಾರಣದಿಂದಲೇ ಇದಕ್ಕೆ ಹಾಥಿ ಪೂಲ ಎಂದು ಕರೆಯುತ್ತಿರಬಹುದು. ಅಥವಾ ಇನ್ನೊಂದು ಕಾರಣ ಎಂದರೆ ಈ ಪ್ರವೇಶದ್ವಾರವು ಎಷ್ಟು ದೊಡ್ಡದಾಗಿದೆ ಎಂದರೆ ಒಂದು ಆನೆ ಕೂಡ ಇದರ ಮೂಲಕ ಹಾಯ್ದು ಹೋಗಬಹುದು. ಆದ್ದರಿಂದ ಇದನ್ನು ಹಾಥಿಪೂಲ ಎಂಬ ಹೆಸರಿನಿಂದ ಕರೆಯುತ್ತಿರಬಹುದು. ಹಾಥಿ ಪೂಲ ಇದು ಕುಪುಲಾ ಗುಮ್ಮಟಗಳಿಂದ ಆವೃತವಾಗಿರುವ ಸಿಲಿಂಡರಾಕಾರದ ಗೋಪುರಗಳನ್ನು ಹೊಂದಿದೆ. ಇದರಿಂದ ಹಾಥಿ ಪೂಲ ಹೆಚ್ಚು ಆಕರ್ಷಕವಾಗಿ ಕಾಣುತ್ತದೆ.


Click it and Unblock the Notifications