ಬಜರಂಗಗಡ್ ಕೋಟೆ ಜಾರ್ಕೊನ್ ಎಂದು ಜನಪ್ರಿಯವಾಗಿದೆ. ಈ ಕೋಟೆ ಗುನಾ ಅರೋನ್ ರಸ್ತೆ ಮೇಲಿದೆ. ಗುನಾ ನೈಋತ್ಯ ದಿಕ್ಕಿನಿಂದ 8 ಕಿ.ಮೀ.ನಲ್ಲಿ ಈ ಕೋಟೆಯಿದೆ. 1775ರಲ್ಲಿ ಮರಾಠ ರಾಜರು ಈ ಕೋಟೆಯನ್ನು ಸ್ಥಾಪಿಸಿದರು. ಈ ಕೋಟೆಯ ಆವರಣದಲ್ಲಿ ತೋಪುಗಾರಿಕೆ, ರಂಗಮಹಲ್ ಮತ್ತು ಮೋತಿಮಹಲ್ ಇದೆ. ಈ ಕೋಟೆಯನ್ನು ಸಂಪೂರ್ಣವಾಗಿ ನಿರ್ನಾಮ ಮಾಡಲಾಗಿದ್ದರೂ ಈಗಲೂ ಇದು ಆಕರ್ಷಕವಾಗಿ ಕಾಣಿಸುತ್ತಿದ್ದು, ಪ್ರವಾಸಿಗರನ್ನು ಸೆಳೆಯುತ್ತಿದೆ. ಬಜರಂಗಗಡ್ ಕೋಟೆ ಸುಮಾರು 92.3 ಮೀಟರ್ ಎತ್ತರವಿದ್ದು, ಕೋಟೆಯ ಒಳಗಡೆ ತೋಪುಗಾರಿಕೆಯಲ್ಲಿ ಬೃಹತ್ ಬಾವಿಯಿದೆ. ಈ ಬಾವಿಯಲ್ಲಿ ಕುದುರೆಗಳಿಗಾಗಿ ನೀರನ್ನು ಸಂಗ್ರಹಿಸಿಡಲಾಗುತ್ತಿತ್ತು. ಈ ಕೋಟೆಯ ಒಳಗಡೆ ಹಳೆಯ ಮಂದಿರವೊಂದಿದ್ದು, ಸ್ಥಳೀಯರು ಇಲ್ಲಿಗೆ ದಿನಾ ಭೇಟಿ ನೀಡುತ್ತಾರೆ.


Click it and Unblock the Notifications