Search
  • Follow NativePlanet
Share
ಮುಖಪುಟ » ಸ್ಥಳಗಳು » ಗುಲ್ಮಾರ್ಗ್ » ಆಕರ್ಷಣೆಗಳು » ನಿಂಗ್ಲೆ ನಾಲಾ(ನೀರಿನ ತೊರೆ)‌

ನಿಂಗ್ಲೆ ನಾಲಾ(ನೀರಿನ ತೊರೆ)‌, ಗುಲ್ಮಾರ್ಗ್

0

ಗುಲ್‌ಮಾರ್ಗ್ ನಿಂದ 10 ಕಿ.ಮೀ. ದೂರದಲ್ಲಿದೆ ನಿಂಗ್ಲೆ ನಾಲಾ‌. ಅಫರ್ವತ ಬೆಟ್ಟದ ತಪ್ಪಲಿನಿಂದ ಹರಿದು ಬರುವ ಈ ತೊರೆಯ ನೀರು ಅತ್ಯಂತ ಶುದ್ಧ ಹಾಗೂ ಪಾರದರ್ಶಕವಾಗಿದೆ. ಇದರಲ್ಲಿ ಔಷಧೀಯ ಗುಣವಿದೆ ಎಂದು ನಂಬಲಾಗುತ್ತದೆ. ಇದಕ್ಕೆ ಬೇಸಿಗೆ ಅವಧಿಯಲ್ಲಿ ಆಲ್ಪಾರ್‌ ಕೆರೆಯಿಂದಲೂ ಸಹ ನೀರು ಬಂದು ಸೇರಿಕೊಳ್ಳುತ್ತದೆ. ಈ ತೊರೆಯು ಬೆಟ್ಟದಿಂದ ಇಳಿದು ಮುಂದೆ ಸಾಗಿ ಸೋಪೊರೆ ಬಳಿ ಝೀಲಮ್ ನದಿಯನ್ನು ಸೇರಿಕೊಳ್ಳುತ್ತದೆ. ಇಲ್ಲಿನ ಅತ್ಯಾಕರ್ಷಕ ಪ್ರದೇಶಗಳು, ಭೂದೃಶ್ಯಗಳು ಕುಟುಂಬ ಸಮೇತರಾಗಿ ಬರುವವರನ್ನು ಬಹುವಾಗಿ ಸೆಳೆಯುತ್ತದೆ. ಆಕರ್ಷಕವಾಗಿ ಅರಳಿ ನಿಂತಿರುವ ಹೂಗಳು, ಪೈನ್‌ ಮರಗಳು, ಹಿಮಾಚ್ಛಾದಿತ ಪರ್ವತಗಳ ತುದಿಗಳು ಈ ಪ್ರದೇಶವನ್ನು ಒಂದು ವಿಶಿಷ್ಟ ಪ್ರವಾಸಿ ತಾಣವನ್ನಾಗಿ ರೂಪಿಸಿವೆ. ಪ್ರವಾಸಿಗರು ಇಲ್ಲಿಗೆ ಆರಾಮವಾಗಿ ರಸ್ತೆ ಮಾರ್ಗದಲ್ಲಿ ತಲುಪಬಹುದು. ಟ್ಯಾಕ್ಸಿಗಳು ದೂರದ ಆಧಾರದ ಮೇಲೆ ಬಾಡಿಗೆಗೆ ಸಿಗುತ್ತವೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed