ಮಹಾರಾಣಿ ದೇವಾಲಯವು ರಾಣಿ ದೇವಾಲಯ ಅಂತಲೂ ಜನಪ್ರಿಯವಾಗಿದೆ. ಗುಲ್‌ಮಾರ್ಗ್ ಗಿರಿಧಾಮಕ್ಕೆ ಸಮೀಪವೇ ಈ ದೇವಾಲಯ ಇದೆ. ಈ ದೇಗುಲವನ್ನು ಮೋಹಿನಿ ಬಾಯಿ ಸಿಸೋಡಿಯಾ ನಿರ್ಮಿಸಿದರು. ಇವರು 1915 ರಲ್ಲಿ ಆಡಳಿತಾಂತ್ಯಕಂಡ ಕಾಶ್ಮೀರದ ಹಿಂದಿನ ಅರಸು ಮಹಾರಾಜಾ ಹರಿಸಿಂಗರ ಪತ್ನಿ. ಪುರಾತನಕಾಲದಲ್ಲಿ ದೋಗ್ರಾ ರಾಜವಂಶಸ್ಥರ ರಾಜದೇವಾಲಯವಾಗಿ ಇದು ಕಾರ್ಯನಿರ್ವಹಿಸುತ್ತಿತ್ತು. ಈ ದೇಗುಲವು ಮೋಹಿನೇಶ್ವರ ಶಿವಾಲಯ ಅಂತಲೂ ಹಲವೆಡೆ ಪ್ರಸಿದ್ಧಿ ಹೊಂದಿದೆ. ಈ ದೇವಾಲಯದ ನಿರ್ಮಾಣ ಮಾದರಿಯನ್ನು ಗುಲ್‌ಮಾರ್ಗ್ ನ ಎಲ್ಲಾ ಮೂಲೆಗಳಲ್ಲೂ ಕಾಣಬಹುದಾಗಿದೆ.
ಹಿಂದು ದೇವರಾದ ಶಿವ ಹಾಗೂ ಆತನ ಅನುಯಾಯಿಗಳು, ಪತ್ನಿ ಪಾರ್ವತಿಯ ಮೂರ್ತಿಗಳು ಇಲ್ಲಿವೆ. ವರ್ಷದ ಎಲ್ಲಾ ದಿನಗಳಲ್ಲಿಯೂ ಶಿವ-ಪಾರ್ವತಿಯರ ಭಕ್ತರು ಈ ದೇವಾಲಯಕ್ಕೆ ಭೇಟಿ ಕೊಡುತ್ತಲೇ ಇರುತ್ತಾರೆ. ಶಾಂತಿ ಮಂತ್ರ ಪಠಿಸಲು ಕೂಡ ಇಲ್ಲಿಗೆ ಜನ ಬರುತ್ತಾರೆ.


Click it and Unblock the Notifications