ಅಚಬಲ್, ಮುಘಲ್ ಅರಸು ಜಹಾಂಗೀರ್‌ನ ಪತ್ನಿ ನೂರ್ ಜಹಾನ್ ನಿಂದ ನಿರ್ಮಿತವಾದ ಉದ್ಯಾನ. ಇದು ಪ್ರವಾಸಿಗರ ಪಾಲಿಗೆ ಒಂದು ಜನಪ್ರಿಯ ಸ್ಥಳ. ಕ್ರಿಸ್ತಶಕ 1620 ರಲ್ಲಿ ಇದರ ನಿರ್ಮಾಣ ಆಗಿದೆ. ಈ ಉದ್ಯಾನವು ಅತ್ಯಾಕರ್ಷಕ ತಾರಸಿ ಉದ್ಯಾನ ಎಂಬ ಖ್ಯಾತಿಗೆ ಭಾಜನವಾಗಿದೆ. ಚಿನಾರ್ ಮರಗಳು, ಕಾರಂಜಿ, ಹಚ್ಚ ಹಸಿರಾದ ಲಾನ್, ಈ ತಾಣದ ಸೌಂದರ್ಯವನ್ನು ಇಮ್ಮಡಿಗೊಳಿಸಿವೆ. ಉದ್ಯಾನಕ್ಕೆ ಜಲಪಾತದ ನೀರು ಹರಿದು ಬರಲು ಅನುಕೂಲವಾಗುವ ರೀತಿ ನಿರ್ಮಿಸಲಾಗಿದೆ. ಈ ಮೊದಲು ಉದ್ಯಾನದ ಮೇಲ್ಭಾಗವು "ಬಾಗ್ ಎ ಬೇಗಂ ಅಬದ್" ಎಂದು ಕರೆಸಿಕೊಂಡಿತ್ತು. ಇದು ಹಮಾಮ್ ಅಥವಾ ನೀರಿನ ಖಜಾನೆ ಅನ್ನಿಸಿಕೊಂಡಿದೆ. ನಂತರದ ಸಮಯದಲ್ಲಿ ಇದು 'ಸಾಹೀಬ್ ಅಬದ್' ಎಂಬ ಹೆಸರಿನಿಂದ ಜನಪ್ರಿಯವಾಗಿದೆ. ಮುಘಲ್ ರಾಜ, ದಾರಾ ಶಿಖೋಹ್ ಎಂಬುವರು ನಂತರದಲ್ಲಿ ಈ ಉದ್ಯಾನದಲ್ಲಿ ಒಂದು ಮಸೀದಿಯನ್ನೂ ನಿರ್ಮಿಸಿದರು.
ಅನಂತನಾಗ್‌ನಿಂದ ಅಚಬಲ್ 8 ಕಿ.ಮೀ. ದೂರದಲ್ಲಿದೆ. ಇನ್ನು ಶ್ರೀನಗರದಿಂದ ಇದರ ದೂರ ಕೇವಲ 56 ಕಿ.ಮೀ. ಮಾತ್ರ. ಪ್ರವಾಸಿಗರಿಗೆ ಇಲ್ಲಿ ತಂಗಲು ಪ್ರವಾಸಿ ಮಂದಿರ ಸೌಲಭ್ಯ ಇದೆ. ಇದಲ್ಲದೇ ವಿಶ್ರಾಂತಿ ಕೇಂದ್ರಗಳೂ ಇವೆ. ಇವೆಲ್ಲವೂ ಈ ತಾಣಕ್ಕೆ ಸಮೀಪದಲ್ಲಿಯೇ ಇವೆ. ಕ್ಯಾಂಪ್ ಹಾಗೂ ಮೀನುಹಿಡಿಯುವ ಕಾರ್ಯಕ್ಕೆ ಕೂಡ ಇಲ್ಲಿಗೆ ಸಮೀಪದಲ್ಲಿಯೇ ಸಾಕಷ್ಟು ಅವಕಾಶ ಇದೆ.


Click it and Unblock the Notifications