Search
  • Follow NativePlanet
Share
ಮುಖಪುಟ » ಸ್ಥಳಗಳು » ಗದಗ್ » ಆಕರ್ಷಣೆಗಳು » ನಾರಾಯಣ ದೇವಸ್ಥಾನ

ನಾರಾಯಣ ದೇವಸ್ಥಾನ, ಗದಗ್

1

ನಾರಾಯಣ ದೇವಸ್ಥಾನವನ್ನು ಪದ್ಮಬ್ಬರಸಿ ಬಸದಿ ಎಂದೂ ಕರೆಯುತ್ತಾರೆ. ಮೂರನೇ ಕೃಷ್ಣನ ಅವಧಿಯಲ್ಲಿ ಕ್ರಿ.ಪೂ 950 ರಲ್ಲಿ ನಿರ್ಮಿಸಿದ ಜೈನ ದೇವಸ್ಥಾನವಿದು. ಗಂಗಾ ಪೆರ್ಮಾಡಿ ಭೂತಯ್ಯ ಕಾಲದಲ್ಲಿ ಆಡಳಿತ ನಡೆಸುತ್ತಿದ್ದ ರಾಣಿ ಪದ್ಮಬ್ಬರಸಿಯು ಈ ದೇವಸ್ಥಾನ ನಿರ್ಮಾಣಕ್ಕೆ ಆಜ್ಞೆ ನೀಡಿದ್ದಳಂತೆ. ರಾಷ್ಟ್ರಕೂಟರ ಆಡಳಿತದಲ್ಲಿ ಕರ್ನಾಟಕದಲ್ಲಿ ನಿರ್ಮಾಣವಾದ ಅತ್ಯಂತ ದೊಡ್ಡ ದೇವಸ್ಥಾನ ಇದು ಎಂದು ಪರಿಗಣಿಸಲ್ಪಟ್ಟಿದೆ. ಗದಗ್‌ಗೆ ಭೇಟಿ ನೀಡಲು ಯೋಜಿಸಿದ ಪ್ರಯಾಣಿಕರು ಈ ದೇವಸ್ಥಾನಕ್ಕೆ ಖಂಡಿತ ಭೇಟಿ ನೀಡಬಹುದಾಗಿದೆ. ಯಾಕೆಂದರೆ ಕರ್ನಾಟಕದಲ್ಲಿ ಅತ್ಯಂತ ಅಪರೂಪದ ರಾಷ್ಟ್ರಕೂಟರ ಶೈಲಿಯ ದೇವಸ್ಥಾನವಿದು.

ಈ ದೇವಸ್ಥಾನದಲ್ಲಿ ದ್ರಾವಿಡ ವಿಮಾನದ ರೀತಿಯ ಶಿಖರವನ್ನು ಹೊಂದಿರುವ ಗರ್ಭಗೃಹವವಿದೆ. ಇದು ತ್ರಿಕೂಟ ರೀತಿಯ ಶಿಖರ. ಇನ್ನೊಂದು ವಿಶೇಷವೆಂದರೆ ಈ ದೇವಸ್ಥಾನದಲ್ಲಿ ಮೂರು ಗರ್ಭಗೃಹವಿದೆ. ಇದರಲ್ಲಿ ಮುಖ್ಯವಾದದ್ದು ಚೌಕಾಕಾರದಲ್ಲಿದೆ. ಆದರೆ ಇನ್ನೆರಡು ಆಯತಾಕಾರದಲ್ಲಿದ್ದು, ಅವುಗಳು ಗೋಡೆಯಿಂದ ಇನ್ನೊಂದು ಗೋಡೆಯ ಜೊತೆಯಾಗಿ ಕಟ್ಟಲಾಗಿದೆ. ಇವರೆಡರಲ್ಲೂ ಒಟ್ಟು 24 ರಂಧ್ರಗಳಿವೆ. ಈ ರಂಧ್ರಗಳನ್ನು 24 ತೀರ್ಥಂಕರರ ಮೂರ್ತಿಗಳ ಮೇಲೆ ಬೆಳಕು ಬೀಳುವಂತೆ ನಿರ್ಮಿಸಲಾಗಿದೆ.

One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun