ಗುರುದ್ವಾರ ಟಿಲ್ಲ ಬಾಬಾ ಫರಿದ್ ಎಂಬುದು ಕಿಲಾ ಮುಬಾರಕ್ ಬಳಿಯಲ್ಲಿ ನೆಲೆಗೊಂಡಿರುವ ಒಂದು ಧಾರ್ಮಿಕ ಸ್ಥಳವಾಗಿದೆ. ನಂಬಿಕೆಗಳ ಪ್ರಕಾರ ಸೂಫಿ ಸಂತ ಬಾಬಾ ಫರಿದ್‍ರವರು ಪಾಕ್‍ಪಟ್ಟನ್‍ಗೆ ಹೋಗುವ ಹಾದಿಯಲ್ಲಿ 40 ದಿನಗಳ ಕಾಲ ಇಲ್ಲಿ ತಂಗಿದ್ದರಂತೆ. ಬಾಬಾ ಫರಿದ್‍ರವರು ತಮ್ಮ ಕೈಗಳನ್ನು ಸ್ವಚ್ಛಗೊಳಿಸಲು ಬಳಸುತ್ತಿದ್ದ, ಮರದ ತುಂಡನ್ನು ಇಂದಿಗು ಇಲ್ಲಿ ಸಂರಕ್ಷಿಸಿ ಇಡಲಾಗಿದೆ. ಈ ಗುರುದ್ವಾರದಲ್ಲಿ ಬಡಬಗ್ಗರಿಗೆ ಅನ್ನದಾನವನ್ನು ಮಾಡಲಾಗುತ್ತದೆ. ಪ್ರತಿ ಗುರುವಾರದಂದು ಸೂಫಿ ಸಂತರಿಗೆ ತಮ್ಮ ಪ್ರಾರ್ಥನೆಗಳನ್ನು ಸಲ್ಲಿಸಲು ಇಲ್ಲಿಗೆ ಅಸಂಖ್ಯಾತ ಮಂದಿ ಭಕ್ತಾಧಿಗಳು ಆಗಮಿಸುತ್ತಿರುತ್ತಾರೆ.


Click it and Unblock the Notifications