ಗುರುದ್ವಾರ ಗೋದ್ರಿ ಸಾಹಿಬ್ ಕೊಟ್ಕಪುರದಿಂದ 4 ಕಿ.ಮೀ ದೂರದಲ್ಲಿರುವ ಕಿಲಾ ಮುಬಾರಕ್ ಬಳಿ ನೆಲೆಗೊಂಡಿದೆ. ಇದನ್ನು ಬಾಬಾ ಶೇಖ್ ಫರಿದ್‍ರವರು ತಮ್ಮ ಮೇಲಂಗಿಯನ್ನು ಬಿಟ್ಟ ಸ್ಥಳದಲ್ಲಿ 1982ರಲ್ಲಿ ನಿರ್ಮಾಣ ಮಾಡಲಾಯಿತು. ಜೊತೆಗೆ ಇಲ್ಲಿ ಸಂತ್ ಸರೋವರ್ ಸಹ ನಿರ್ಮಾಣಗೊಂಡಿದೆ. ಇದರಲ್ಲಿ ಭಕ್ತಾಧಿಗಳು ಸ್ನಾನವನ್ನು ಮಾಡುತ್ತಾರೆ. ಅದರಲ್ಲಿಯೂ ಗುರುವಾರದಂದು ಇಲ್ಲಿ ತೀರ್ಥಸ್ನಾನ ಮಾಡುವುದು ಅತ್ಯಂತ ಪವಿತ್ರವೆಂದು ಭಾವಿಸಲಾಗಿದೆ.


Click it and Unblock the Notifications