ಘುಮ್ಲಿ ಬರ್ದಾ ಬೆಟ್ಟಗಳ ತಪ್ಪಲಿನಲ್ಲಿರುವ ಒಂದು ಸಣ್ಣ ಹಳ್ಳಿ. ಜೆತ್ವಾ ಸಾಲ್ ಕುಮಾರ್ ಎನ್ನುವವನಿಂದ ಕ್ರಿಶ 7 ನೇ ಶತಮಾನದಲ್ಲಿ ಸ್ಥಾಪಿಸಲ್ಪಟ್ಟಿತು. ಇದು ಗುಜರಾತಿನ ಸುಂದರ ದೇವಾಲಯಗಳ ತವರು ಭೂಮಿಯಾಗುವುದಕ್ಕೂ ಮುಂಚೆ ಜೆತ್ವಾ ಸಾಮ್ರಾಜ್ಯದ ರಾಜಧಾನಿಯಾಗಿತ್ತು. ಇಲ್ಲಿನ ಪ್ರಸಿದ್ಧ ದೇವಾಲಯಗಳಲ್ಲಿ ಒಂದು ಸೊಲಂಕಿ ವಂಶದವರ ನವಲಖ ದೇವಾಲಯ. ಇದು ಗುಜರಾತಿನ ಪುರಾತನ ಸೂರ್ಯ ದೇವಾಲಯ ಎಂದು ಹೇಳಲಾಗುತ್ತದೆ. ಇಲ್ಲೊಂದು ಮೆಟ್ಟಿಲುಗಳಿರುವ ಬಾವಿ ವಿಕೈವಾವ್ ಕೂಡ ಇದೆ. ಗುಜರಾತ್ ಸರ್ಕಾರ ಮತ್ತು ಭಾರತೀಯ ಪುರಾತತ್ವ ಪರಿವೀಕ್ಷಣಾಲಯವು ಈ ಐತಿಹಾಸಿಕ ನಗರದ ಪುನರುತ್ಥಾನದ ಕೆಲಸವನ್ನು ಕೈಗೆತ್ತಿಕೊಂಡಿದೆ.


Click it and Unblock the Notifications