ಹಿಂದೂಗಳ ಮಹತ್ವದ ಧಾರ್ಮಿಕ ತಾಣಗಳಲ್ಲೊಂದು ಕೈಲಾಸಯಾತ್ರೆ. ಈ ಯಾತ್ರೆ ಅಥವಾ ಪ್ರವಾಸ ಪ್ರತಿವರ್ಷದ ಆಗಸ್ಟ್ ತಿಂಗಳಲ್ಲಿ ಗಥ ಅಥವಾ ಈ ಹಿಂದೆ ಘೋಷ್ಟಾ ಎಂದು ಕರೆಯಲ್ಪಟ್ಟಿದ್ದ ಪ್ರದೇಶದಿಂದ ಕೈಲಾಶ್ ಕುಂಡ್‌ವರೆಗಿರುತ್ತದೆ. ಕೈಲಾಶ್ ಕುಂಡದ ನೀರು ಚೀನಾದ ಮಾನಸ ಸರೋವರದಷ್ಟೇ ಪವಿತ್ರ ಎಂಬುದು ಹಿಂದೂ ಮತ್ತು ಬೌದ್ಧ ಧರ್ಮದ ಭಕ್ತರ ಅಚಲ ನಂಬಿಕೆ. ತಣ್ಣನೆ ಕೊರೆಯುವ ಮಂಜು ಕರಗಿದ ನೀರಿನಲ್ಲಿ ಮಿಂದೇಳುವ ಮೂಲಕ ಸಕಲ ಪಾಪಗಳಿಂದ ವಿಮುಕ್ತರಾಗುವ ಜತೆಗೆ, ಇಷ್ಟಾರ್ಥಗಳೆಲ್ಲವು ಈಡೇರುತ್ತವೆ ಎಂಬ ಅಚಲವಾದ ನಂಬಿಕೆಯನ್ನು ಭಕ್ತರು ಇಟ್ಟುಕೊಂಡಿದ್ದಾರೆ.


Click it and Unblock the Notifications