ದಿಂಡುಕಲ್ ಬೆಟ್ಟದ 280 ಅಡಿ ಎತ್ತರದಲ್ಲಿರುವ ದಿಂಡುಕಲ್ ಕಲ್ಲಿನ ಕೋಟೆ ಮಹತ್ವದ ಐತಿಹಾಸಿಕ ಹೆಗ್ಗುರುತಾಗಿದೆ. ಮಧುರೈ ರಾಜವಂಶದ ಮುತ್ತು ಕೃಷ್ಣ ನಾಯ್ಕರ್ನಿಂದ ಇದು 17 ನೆ ಶತಮಾನದಲ್ಲಿ ಕಟ್ಟಲಾಯಿತು.ನಂತರ ಇದನ್ನು ಸಾಕಷ್ಟು ರಾಜರು ಆಕ್ರಮಿಸಿದರು. 18 ನೇ ಶತಮಾನದಲ್ಲಿ ಟಿಪ್ಪು ಸುಲ್ತಾನ್ ಇದನ್ನು ಆಳ್ವಿಕೆ ನಡೆಸಿ ಆತ ಸೋತ ನಂತರ ಇದು ಬ್ರಿಟಿಷರ ಕೈಕೆಳಗೆ ಹೋಯಿತು. ದೇಶದ ಇತಿಹಾಸ ಮತ್ತು ವಾಸ್ತುಶಿಲ್ಪದ ಬಗ್ಗೆ ಆಸಕ್ತಿ ಇದ್ದವರು ಈ ಕೋಟೆಯನ್ನು ನೋಡಲೇಬೇಕು.


Click it and Unblock the Notifications