Search
  • Follow NativePlanet
Share
ಮುಖಪುಟ » ಸ್ಥಳಗಳು » ದಿಂಡುಕ್ಕಲ್ » ಹವಾಮಾನ

ದಿಂಡುಕ್ಕಲ್ ಹವಾಮಾನ

ಚಳಿಗಾಲ ಮತ್ತು ಮಳೆಗಾಲ ದಿಂಡುಕ್ಕಲ್ ಗೆ ಭೇಟಿ ನೀಡಲು ಸೂಕ್ತ ಸಮಯ.ಜುಲೈ ನಿಂದ ಫೆಬ್ರವರಿ ವರೆಗೆ ನಗರವನ್ನು ನೋಡಲು ಸಕಾಲ .ಈ ಸಮಯದಲ್ಲಿ ವಾತಾವರಣ ತಂಪು ಮತ್ತು ಅಹ್ಲಾದಕರವಾಗಿರುವುದರಿಂದ ಪ್ರಯಾಣವನ್ನು ಸುಖಕರವಾಗಿಸುತ್ತದೆ . ಮಳೆಯ ನಂತರ ನಗರವು ಸೊಂಪಾಗಿ ಗಮನಾರ್ಹವಾಗಿರುತ್ತದೆ.

ಬೇಸಿಗೆಗಾಲ

ದಕ್ಷಿಣ ಭಾರತದ ಉಳಿದ ನಗರಗಳಂತೆ ದಿಂಡುಕ್ಕಲ್ನಲ್ಲಿ ಉಷ್ಣ ವಾತಾವರಣ. ಬೇಸಿಗೆ ತಿಂಗಳುಗಳು ಒಣ ಮತ್ತು ಬಿಸಿಯಾಗಿ ಹೆಚ್ಚಿನ ಆರ್ದ್ರತೆಯಿಂದ ಕೂಡಿರುತ್ತದೆ. ಮಾರ್ಚ್ ನಿಂದ ಮೇ ತಿಂಗಳಿನಲ್ಲಿ ಉಷ್ಣಾಂಶ 45 ಡಿಗ್ರಿ ವರೆಗೆ ಹೆಚ್ಚುತ್ತದೆ. ಬಿಸಿ ಗಾಳಿಗಳು ಈ ಸಂಧರ್ಭದಲ್ಲಿ ಕಾಣಿಸಿಕೊಳ್ಳುತ್ತವೆ. ಇದು ಪ್ರವಾಸಕ್ಕೆ ಸೂಕ್ತ ಸಮಯವಲ್ಲ.

ಮಳೆಗಾಲ

ಜೂನ್ ನಿಂದ ಸೆಪ್ಟೆಂಬರ್ ಇಲ್ಲಿ ಮಳೆಗಾಲ. ಈ ಸಮಯದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಮಳೆ ಆಗುವುದರೊಂದಿಗೆ ಉಷ್ಣಾಂಶ ಸ್ವಲ್ಪ ಕಡಿಮೆ ಆಗುತ್ತದೆ. ಈ ಸಮಯದಲ್ಲಿ ವಾತಾವರಣ ಅಹ್ಲಾದಕರವಾಗಿರುವುದರಿಂದ ಇದು ಪ್ರವಾಸಕ್ಕೆ ಸೂಕ್ತ ಸಮಯ.

ಚಳಿಗಾಲ

ಡಿಸೆಂಬರ್ ನಿಂದ ಫೆಬ್ರವರಿ ಇಲ್ಲಿ ಚಳಿಗಾಲ ಈ ಸಂದರ್ಭದಲ್ಲಿ ವಾತಾವರಣ ಸೊಗಸಾಗಿದ್ದು 20 ರಿಂದ 30 ಡಿಗ್ರೀ ಸೆಲ್ಸಿಯಸ್ ನಷ್ಟಿರುತ್ತದೆ . ಇದು ದಿಂಡುಕ್ಕಲ್ ಅನ್ನು ಭೇಟಿ ಮಾಡಲು ಉತ್ತಮ ಸಮಯ.