ತ್ರಿಯೂಂಡ್ (Triund), ಇದೊಂದು ಮ್ಯಾಕ್ ಲಿಯೋಡ್ ಗಂಜ್ ನ ಪ್ರಸಿದ್ಧ ಪ್ರವಾಸಿ ತಾಣವಾಗಿದೆ. ಇದು ಸಮುದ್ರ ಮಟ್ಟದಿಂದ 2827 ಮೀಟರ್ ಎತ್ತರದಲ್ಲಿದ್ದು, ಪ್ರಬಲ ಹಿಮಾಲಯದ ಧೌಲಾಧರ್ ಶ್ರೇಣಿಯಲ್ಲಿದೆ. ಮ್ಯಾಕ್ ಲಿಯೋಡ್ ಗಂಜ್ ನಿಂದ ತ್ರಿಯೂಂಡ್ ವರೆಗೆ 9 ಕೀ.ಮಿ ವರೆಗೆ ಚಾರಣ ಮಾಡಬಹುದು. ರಕ್ಕರ್ ಹಾಗೂ ಧರಮ್ ಕೋಟ್ ಈ ಹಳ್ಳಿಗಳ ಸೊಬಗು ಚಾರಣದ ಮಾರ್ಗದಲ್ಲಿ ಚಾರಣ ಮಾಡುವವರಿಗೆ ಮನಸ್ಸಿಗೆ ಮುದ ನೀಡುತ್ತವೆ. ಇದು ಧರ್ಮಶಾಲಾದಿಂದ 17 ಕೀ.ಮಿ ಅಂತರದಲ್ಲಿದೆ. ತ್ರಿಯೂಂಡ್ ಅತ್ಯಂತ ಹೆಸರುವಾಸಿಯಾದ ಪ್ರವಾಸಿ ತಾಣವಾಗಿದೆ. ತ್ರಿಯೂಂಡ್ ಶೃಂಗವು ಚಂದ್ರ ಶಿಖರ ಮತ್ತು ಇಂದೆರಾ ಪಾಸ್ ಗಳ ಅತ್ಯಂತ ಅಮೋಘವಾದ ದೃಶ್ಯ ಸೌಂದರ್ಯವನ್ನು ಒದಗಿಸುತ್ತದೆ.


Click it and Unblock the Notifications