Search
  • Follow NativePlanet
Share
ಮುಖಪುಟ » ಸ್ಥಳಗಳು » ಧರ್ಮಶಾಲಾ » ಆಕರ್ಷಣೆಗಳು » ಕಂಗ್ರಾ ಕಲಾ ವಸ್ತು ಸಂಗ್ರಹಾಲಯ

ಕಂಗ್ರಾ ಕಲಾ ವಸ್ತು ಸಂಗ್ರಹಾಲಯ, ಧರ್ಮಶಾಲಾ

1

ಕಂಗ್ರಾ ಕಲಾ ವಸ್ತು ಸಂಗ್ರಹಾಲಯವು ಧರ್ಮಶಾಲದಲ್ಲಿರುವ ಕೊಟ್ವಾಲಿ ಬಜಾರ್ ನಲ್ಲಿದ್ದು ಕಂಗ್ರಾದ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ. ಪ್ರವಾಸಿಗರು ಇಲ್ಲಿ ಕಂಗ್ರಾ ಕಲಾಮ್ ಕಲೆಯ ವೈಶಿಷ್ಟ್ಯತೆಯನ್ನು ವೀಕ್ಷಿಸಬಹುದು. ಈ ಕಲೆಯಲ್ಲಿ ಮೂಡಿರುವ ಮನಮೋಹಕ ವರ್ಣ ಚಿತ್ರಗಳನ್ನು ನೀವು ಇಲ್ಲಿ ವೀಕ್ಷಿಸಬಹುದು. ಇಲ್ಲಿರುವ ಕಲಾವಸ್ತುಗಳು ಸುಮಾರು 5ನೇ ಶತಮಾನದಷ್ಟು ಹಿಂದಿನ ಇತಿಹಾಸವನ್ನು ಹೊಂದಿವೆ.

ಈ ವಸ್ತುಸಂಗ್ರಾಹಲಯವು ಒಂದು ಗ್ರಂಥಾಲಯ ಮತ್ತು ಸಮಕಾಲೀನ ಕಲಾವಿದರು ಕೆತ್ತಿರುವ ಶಿಲ್ಪಗಳನ್ನು ಮತ್ತು ಭಾವಚಿತ್ರಗಳನ್ನು ಹೊಂದಿದೆ. ಇದರ ಜೊತೆಗೆ ವೀಕ್ಷಕರು, ಮಡಿಕೆಗಳ ಮೇಲೆ ಚಿತ್ರಿಸಿರುವ ಸುಂದರ ಕುಸುರಿಗಳನ್ನು, ಶಿಲ್ಪಗಳನ್ನು ಇಲ್ಲಿ ವೀಕ್ಷಿಸಬಹುದು. ಇದರ ಜೊತೆಗೆ ಟಿಬೇಟಿಯನ್ನರ ಮತ್ತು ಬೌದ್ಧರ ಸಂಸ್ಕೃತಿಯನ್ನು ಬಿಂಬಿಸುವ ಕುಶಲ ವಸ್ತುಗಳನ್ನು ಇಲ್ಲಿ ಕಾಣಬಹುದು. ಇಲ್ಲಿರುವ ಹಲವಾರು ವಸ್ತುಗಳ ಜೊತೆಗೆ ಬುಡಕಟ್ಟು ಜನರ ಆಭರಣಗಳನ್ನು, ಮರದ ಕೆತ್ತನೆಗಳನ್ನು ಮತ್ತು ಕಸೂತಿ ಮಾಡಿದ ವಸ್ತ್ರಗಳನ್ನು ಕಾಣಬಹುದು.

ಇದರ ಜೊತೆಗೆ ಕಂಗ್ರಾ ಕಲಾಮ್ ಕಲೆ ಅಥವಾ ಪಹರಿ ಮಿನಿಯೇಚರ್ ಚಿತ್ರಕಲೆಯ ಸುಂದರ ಮಾದರಿಗಳನ್ನು ನೀವು ಇಲ್ಲಿ ಕಾಣಬಹುದು. ಈ ಮಾದರಿಯ ಕಲೆಯನ್ನು ಸ್ವತಃ ಈ ವಸ್ತು ಸಂಗ್ರಹಾಲಯವೆ ಪೋಷಿಸಿ ಬೆಳೆಸುತ್ತಿದೆ. ಕಂಗ್ರಾ ಕಲಾ ವಸ್ತು ಸಂಗ್ರಹಾಲಯವು ಹಿಮಾಚಲ್ ಪ್ರದೇಶದ ಒಂದು ಸ್ವಾಯತ್ತ ಸಂಸ್ಥೆಯಾಗಿದ್ದು, ಇಲ್ಲಿನ ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ ಬೆಳೆಸುತ್ತದೆ. ಇಲ್ಲಿ ಒಣ ಗಿಡ ಮೂಲಿಕೆ ಮತ್ತು ಹೂವುಗಳಿಂದ ನಿರ್ಮಿಸಲಾಗಿರುವ ಚಿತ್ರ ಮತ್ತು ಕಲಾ ಫಲಕಗಳು ಭಾರೀ ಜನಪ್ರಿಯವಾಗಿವೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed

Near by City