ಧನೌಲ್ತಿಯ ಮುಖ್ಯ ಮಾರುಕಟ್ಟೆಯ ಸಮೀಪದಲ್ಲಿ ಆಲೂಖೇತ್ ಎಂಬ ಹೆಸರಿನ ಆಲೂಗಡ್ಡೆ ತೋಟ ಇದೆ. ಇದನ್ನು ಉತ್ತರಾಖಂಡ್ ಸರಕಾರ ತನ್ನ ಆಡಳಿತದಲ್ಲಿ ಇರಿಸಿಕೊಂಡಿದೆ. ಸೂರ್ಯೋದಯ ವೀಕ್ಷಣಾ ಕೇಂದ್ರವೂ ಇರುವ ಇಲ್ಲಿಂದ ಡುನ್ ಕಣಿವೆಯ ಅಭೂತಪೂರ್ವವಾದ ದೃಶ್ಯ ನೋಡಲೇಂದೇ ಪ್ರತಿವರ್ಷ ಹಲವಾರು ಪ್ರವಾಸಿಗರು ಬರುತ್ತಾರೆ. ಇಲ್ಲಿ ತಿರುಗಾಡಲು ಪ್ರವಾಸಿಗರು ಕುದುರೆಗಳನ್ನು ಬಾಡಿಗೆಗೆ ಪಡೆಯಬಹುದಾಗಿದೆ. ಇಲ್ಲಿ ದೊಡ್ಡ ಪ್ರಮಾಣದಲ್ಲಿ ಆಲೂಗಡ್ಡೆಯನ್ನು ಬೆಳೆಯಲಾಗುತ್ತದೆ. ಇದನ್ನು ಭಾರತದ ಇತರೆ ರಾಜ್ಯಗಳಿಗೂ ಕಳುಹಿಸಲಾಗುತ್ತದೆ.


Click it and Unblock the Notifications