ದೇವಪ್ರಯಾಗದ ಮ್ರಮುಖ ಆಕರ್ಷಣೆಗಳ ಪೈಕಿ ಒಂದಾದ ರಘುನಾಥ ದೇವಸ್ಥಾನ ಹಿಂದೂಗಳ ಶ್ರದ್ಧಾ ಭಕ್ತಿಯ ಕೇಂದ್ರ. ಶ್ರೀ ರಾಮಚಂದ್ರನನ್ನು ಇಲ್ಲಿ ಆರಾಧಿಸಲಾಗುತ್ತದೆ. ಶ್ರೀರಾಮ, ಸೀತಾ ಹಾಗೂ ಲಕ್ಷ್ಮಣರ ವಿಗ್ರಹವನ್ನು ಮುಖ್ಯವಾಗಿ ಇಲ್ಲಿ ಪೂಜಿಸಲಾಗುತ್ತದೆ. ಕುಲ್ಲುವನ್ನು ಆಳುತ್ತಿದ್ದ ರಾಜಾ ಜಗತ್‌ಸಿಂಗ್ ಈ ದೇವಾಲಯವನ್ನು ಸಾವಿರ ವರ್ಷಗಳ ಹಿಂದೆ ಕಟ್ಟಿದನೆಂಬ ನಂಬಿಕೆ ಇದೆ.
ಇವತ್ತು ನಾವು ಕಾಣುತ್ತಿರುವ ಈ ದೇವಾಲಯದ ವಿನ್ಯಾಸ ಜಮ್ಮು ಮತ್ತು ಕಾಶ್ಮೀರದ ಮಹಾರಾಜ ಗುಲಾಭ್‌ಸಿಂಗ್ 1835 ರಲ್ಲಿ ಮರು ನಿರ್ಮಾಣ ಮಾಡಿದ್ದಾಗಿದೆ. 1835 ರಲ್ಲಿ ಶುರುವಾದ ನವೀಕರಣ ಕಾಮಗಾರಿ 1860 ರಲ್ಲಿ ಪೂರ್ಣಗೊಂಡ ಬಗ್ಗೆ ಐತಿಹಾಸಿಕ ದಾಖಲೆಗಳು ಹೇಳುತ್ತವೆ. ಈ ಅವಧಿಯಲ್ಲಿ ರಾಜಾಗುಲಾಭ್‌ಸಿಂಗ್ ನ ಮಗ ರಣಭೀರ್ ಸಿಂಗ್ ಆಳ್ವಿಕೆ ನಡೆಸುತ್ತಿದ್ದ.
ದೇವಾಲಯದ ಮೂರೂ ಬದಿಯ ಒಳಗೋಡೆಗಳಿಗೆ ಚಿನ್ನದ ಹಾಳೆಯ ಹೊದಿಗೆ ಹೊದಿಸಲಾಗಿದ್ದು, ಹಿಂದೂ ದೇವತೆಗಳ ಚಿತ್ರವನ್ನು ಮೂಡಿಸಲಾಗಿದೆ. ರಾಮ, ಕೃಷ್ಣ, ತೆಲುಗು ಮಾತನಾಡುವ ಅರ್ಚಕರು ಇಲ್ಲಿ ಧಾರ್ಮಿಕ ವಿಧಿವಿಧಾನಗಳನ್ನು ನಡೆಸುತ್ತಾರೆ.


Click it and Unblock the Notifications