Search
  • Follow NativePlanet
Share
ಮುಖಪುಟ » ಸ್ಥಳಗಳು » ದೆಹಲಿ » ಆಕರ್ಷಣೆಗಳು » ವ್ಯಾಪಾರ ವಹಿವಾಟು

ವ್ಯಾಪಾರ ವಹಿವಾಟು, ದೆಹಲಿ

20

ದೆಹಲಿಯಲ್ಲಿ ವ್ಯಾಪಾರ ವಹಿವಾಟು ಮಾಡುವುದು ಯಾರಿಗಾದರು ಸರಿ ಒಂದು ಚೇತೋಹಾರಿ ಅನುಭವವನ್ನು ನೀಡುತ್ತದೆ. ಇಲ್ಲಿ ಗ್ರಾಹಕರಿಗೆ ರಸ್ತೆ ಬದಿಯ ಅಂಗಡಿಗಳಿಂದ ಹಿಡಿದು ಬಹು ಮಹಡಿ ಕಟ್ಟಡಗಳನ್ನು ಹೊಂದಿರುವ ಮಳಿಗೆಗಳವರೆಗು ವ್ಯಾಪಾರ ಕೇಂದ್ರಗಳು ದೊರೆಯುತ್ತವೆ. ಇವುಗಳಲ್ಲಿ ಗ್ರಾಹಕರು ತಮಗೆ ಯಾವುದು ಬೇಕೊ ಅದನ್ನು ಆಯ್ಕೆ ಮಾಡಿಕೊಳ್ಳಬಹುದು. ಬನ್ನಿ ದೆಹಲಿಯಲ್ಲಿ ನಿಮಗೆ ಬೇಕಾದ ವಸ್ತುಗಳು ಎಲ್ಲಿ ದೊರೆಯುತ್ತವೆ ಎಂಬುದರ ಪಕ್ಷಿನೋಟವನ್ನು ಪಡೆಯೋಣ.

ಜನ್‍ಪಥ್ : ಕೊಳ್ಳುಬಾಕ ಗ್ರಾಹಕರೆಲ್ಲರಿಗು ವಿಶೇಷವಾಗಿ ಹೇಳುವ ಒಂದೆ ಒಂದು ಮಾತು ಎಂದರೆ ದೆಹಲಿಯು ಗ್ರಾಹಕರ ಸ್ವರ್ಗವೆಂದು. ಆದಾಗಿಯು ನಾವು ನಿಮಗೆ ದೆಹಲಿಯಲ್ಲಿ ಅತ್ಯುತ್ತಮ ವಸ್ತುಗಳು ದೊರೆಯುವ ಅದ್ಭುತವಾದ ಸ್ಥಳಗಳನ್ನು ಪರಿಚಯಿಸುತ್ತೇವೆ. ಅಂತಹ ಸ್ಥಳಗಳಲ್ಲಿ ಜನ್‍ಪಥ್ ಎಂಬುದು ಮುಂಚೂಣಿಯಲ್ಲಿ ನಿಲ್ಲುತ್ತದೆ. ಜನ್‍ಪಥ್ ತನ್ನಲ್ಲಿರುವ ಜನ್‍ಪಥ್ ಮಾರುಕಟ್ಟೆಗೆ ಹೆಸರುವಾಸಿಯಾಗಿದೆ. ಈ ಸ್ಥಳಕ್ಕೆ ನೀವು ಭೇಟಿಕೊಟ್ಟರೆ ಹೊಚ್ಚ ಹೊಸ ಫ್ಯಾಶನ್ ಎಂದು ಕರೆಯಲಾಗುವ ಅಷ್ಟೇನು ಅಮೂಲ್ಯವಲ್ಲದ ಹರಳು ಕಲ್ಲುಗಳಿಂದ ಅಲಂಕೃತಗೊಂಡಿರುವ ಕೃತಕ ಆಭರಣಗಳು, ಉಡುಗೆ ತೊಡುಗೆಗಳು ಮತ್ತು ಇನ್ನಿತರ ಮಿತ ವ್ಯಯಕರವಾದ ಆಭರಣಗಳನ್ನು ನೋಡಬಹುದು ಮತ್ತು ಖರೀದಿಸಬಹುದು. ಇವುಗಳೊಂದಿಗೆ ಗೃಹಾಲಂಕಾರದ ವಸ್ತುಗಳು, ಕರಕುಶಲ ವಸ್ತುಗಳು, ಕುತೂಹಲ ಕೆರಳಿಸುವ ಪುಸ್ತಕಗಳು ಮತ್ತು ಇತ್ಯಾದಿ ವಸ್ತುಗಳನ್ನು ಸಹ ನೀವು ಖರೀದಿಸಬಹುದು. ಇಲ್ಲಿ ಕೆಲವು ಟಿಬೇಟಿಯನ್ ನಿರಾಶ್ರಿತರನ್ನು ಸಹ ನಾವು ಕಾಣಬಹುದು. ಆದರೆ ನಕಲಿ ಮತ್ತು ಕಳ್ಳತನದ ವಸ್ತುಗಳ ಕುರಿತು ಎಚ್ಚರಿಕೆಯಿಂದ ಇರಿ. ಇಲ್ಲಿನ ವ್ಯಾಪಾರಿಗಳು ಇವುಗಳನ್ನು ನಿಮಗೆ ಬಲವಂತವಾಗಿ ಗಂಟು ಹಾಕುವ ಸಂಭವವಿರುತ್ತದೆ.

ಟಿಬೇಟಿಯರ ಮಾರುಕಟ್ಟೆ : ಟಿಬೇಟಿಯನ್ನರ ಉಡುಗೆ ತೊಡುಗೆಗಳು, ಅಲಂಕಾರಿಕ ಕಂಚಿನ ಆಭರಣಗಳು, ಥಂಗ್ಖಾಸ್, ಬೆಳ್ಳಿಯ ಉಪಕರಣಗಳು, ಸಂಗೀತ ಪರಿಕರಗಳು ಮತ್ತು ಗೋಡೆಗೆ ತೂಗು ಹಾಕುವ ಅಲಂಕಾರಿಕ ವಸ್ತುಗಳನ್ನು ಇಲ್ಲಿ ಮಾರಲಾಗುತ್ತದೆ.

ಚೋರ್ ಬಜಾರ್ : ಇದರ ಅರ್ಥ "ಕಳ್ಳರ ಪೇಟೆ" ಎಂದಾಗುತ್ತದೆ. ಇದು ಐತಿಹಾಸಿಕ ಕೆಂಪುಕೋಟೆಗೆ ಸಮೀಪದಲ್ಲಿದೆ. ಇಲ್ಲಿ ಲಜ್‍ಪತ್ ರಾಯ್ ಮಾರುಕಟ್ಟೆ ಎಂಬ ಇನ್ನೊಂದು ಮಾರುಕಟ್ಟೆಯೂ ಸಹ ಇದೆ. ಈ ಮಾರುಕಟ್ಟೆಯು ವಿವಿಧ ಬಗೆಯ ಅಗ್ಗದ ಎಲೆಕ್ಟ್ರಾನಿಕ್ ಉತ್ಪನ್ನಗಳಿಗೆ ಹೆಸರುವಾಸಿಯಾಗಿದೆ.

ದರ್ಯಾಗಂಜ್ ಪುಸ್ತಕ ಮಾರುಕಟ್ಟ : ನೀವು ಪುಸ್ತಕ ಪ್ರಿಯರೆ? ದೆಹಲಿಯಲ್ಲಿದ್ದು ಪುಸ್ತಕಗಳಿಗಾಗಿ ಹುಡುಕಾಡ್ತಿರುವಿರೆ? ಹಾಗಾದರೆ ಶಹಜಹನ್‍ಬಾದ್‍ನ ಗೋಡೆಗಳ ನಡುವೆ ನೆಲೆಸಿರುವ ದರ್ಯಾಗಂಜ್ ಮಾರುಕಟ್ಟೆಗೆ ಒಮ್ಮೆ ಭೇಟಿಕೊಡಿ. ಇದನ್ನು ಹಳೆದೆಹಲಿ ಎಂದೂ ಸಹ ಕರೆಯುತ್ತಾರೆ. ಪ್ರತಿ ಭಾನುವಾರ ಭಾರಿ ಜನಜಂಗುಳಿ ಸೇರುವ ಕಿತಾಬ್ ಬಜಾರ್ (ಪುಸ್ತಕ ಮಾರುಕಟ್ಟೆ) ಇಲ್ಲಿಯೆ ಕಾಣಸಿಗುತ್ತದೆ. ಇಲ್ಲಿ ನಿಮಗೆ ಹಳೆಯ ಪುಸ್ತಕಗಳಿಂದ ಹಿಡಿದು ಹೊಚ್ಚ ಹೊಸ ಪುಸ್ತಕದವರೆಗು ಎಲ್ಲ ಬಗೆಯ ಪುಸ್ತಕಗಳು ದೊರೆಯುತ್ತವೆ. ಅಷ್ಟೇ ಅಲ್ಲದೆ, ಇದು ವಿಶ್ವದ ಅತ್ಯಂತ ದೊಡ್ಡ ವಾರಕ್ಕೊಮ್ಮೆ ಸೇರುವ ಪುಸ್ತಕ ಮಾರುಕಟ್ಟೆ ಎಂಬ ಖ್ಯಾತಿಗೆ ಪಾತ್ರವಾಗಿದೆ.

ಖಾನ್ ಮಾರುಕಟ್ಟೆ : ನೀವು ದೆಹಲಿಯಲ್ಲಿದ್ದರೆ ಒಮ್ಮೆ ಖಾನ್ ಮಾರುಕಟ್ಟೆಗೆ ಭೇಟಿಕೊಡಿ. ಭಾರತ ಉಪಖಂಡದಲ್ಲಿರುವ ಅತ್ಯಂತ ದುಬಾರಿ ಚಿಲ್ಲರೆ ಮಾರುಕಟ್ಟೆ ಎಂದು ಖ್ಯಾತಿಪಡೆದಿರುವ ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡುವ ಸುಸಂದರ್ಭವನ್ನು ನಿಮ್ಮದಾಗಿಸಿಕೊಳ್ಳಿ. 1951ರಲ್ಲಿ ಸ್ಥಾಪನೆಗೊಂಡ ಈ ಮಾರುಕಟ್ಟೆಯು ಗಡಿನಾಡ ಗಾಂಧಿ ಎಂದು ಕರೆಯಲ್ಪಡುತ್ತಿದ್ದ, ಖಾನ್ ಅಬ್ಧುಲ್ ಗಫರ್ ಖಾನ್‍ರವರ ಹೆಸರನ್ನು ಹೊಂದಿದೆ. ಈ ಜನದಟ್ಟಣೆಯ ಸ್ಥಳದಲ್ಲಿ ಹಲವಾರು ಪ್ರಸಿದ್ಧ ಕಂಪೆನಿಗಳ ಶೋರೂಮ್‍ಗಳನ್ನು ನಾವು ಕಾಣಬಹುದು. ಅವುಗಳಲ್ಲಿ ರೀಬಾಕ್, ನೈಕಿ, ಟಾಮಿ ಹಿಲ್ಫಿಗರ್, ಗುಡ್‍ಅರ್ಥ್ ಮತ್ತು ಫ್ಯಾಬ್ ಇಂಡಿಯಾದಂತಹ ಹಲವಾರು ಬ್ರ್ಯಾಂಡ್‍ಗಳ ಶೋರೂಮ್‍ಗಳು ಇಲ್ಲಿವೆ. ಈ ಐಶಾರಾಮಿ ಬೀದಿಯು ವಿಶ್ವದ ಅತ್ಯಂತ ದುಬಾರಿ ಚಿಲ್ಲರೆ ಮಾರುಕಟ್ಟೆಗಳನ್ನು ಹೊಂದಿರುವ ಬೀದಿಗಳಲ್ಲಿನ ಅಂಗಡಿಗಳಲ್ಲಿ, 21 ನೇ ಸ್ಥಾನವನ್ನು ಪಡೆದಿದೆ. ಪ್ರಖ್ಯಾತ ರಿಯಲ್ ಎಸ್ಟೇಟ್ ಕಂಪೆನಿಯಾದ ಕುಶ್ಮನ್ ಮತ್ತು ವೇಕ್‍ಫೀಲ್ಡ್ ರವರು 2010 ರಲ್ಲಿ ನಡೆಸಿದ ಅಧ್ಯಯನದಲ್ಲಿ ಈ ಬೀದಿಗೆ ಈ ಸ್ಥಾನ ಬಂದಿತು. ಇಲ್ಲಿ ಅಡುಗೆ ಮನೆಯ ಉಪಕರಣಗಳು, ಬೆಳ್ಳಿ ಆಭರಣಗಳು, ಎಲೆಕ್ಟ್ರಾನಿಕ್ ವಸ್ತುಗಳು, ಪುಸ್ತಕಗಳು, ಐಶಾರಾಮಿ ಪೀಠೋಪಕರಣಗಳು, ಬಣ್ಣಗಳು, ಗಾಜಿನ ಸಾಮಾನುಗಳು, ಪಾತ್ರೆ-ಪಗಡೆಗಳು, ದೀಪದ ವಸ್ತುಗಳು, ಬಟ್ಟೆ-ಬರೆ ಹೀಗೆ ಮುಂತಾದ ಹತ್ತು ಹಲವಾರು ವಸ್ತುಗಳನ್ನು ಇಲ್ಲಿ ಕೊಳ್ಳಬಹುದು.

ಕಾನ್ನಟ್ ಸ್ಥಳ :   ಸಿಪಿ (ಕಾನ್ನಟ್ ಪ್ಲೇಸ್) ಎಂದೆ ಖ್ಯಾತಿ ಪಡೆದಿರುವ ಈ ಸ್ಥಳವು ಪಾಶ್ಚಿಮಾತ್ಯ ವಸ್ತುಗಳನ್ನು ಭಾರತೀಯ ದರದಲ್ಲಿ ಮಾರಲು ಭಾರೀ ಜನಪ್ರಿಯತೆ ಪಡೆದಿದೆ. ಇದು ದೆಹಲಿಯ ಐತಿಹಾಸಿಕ ವ್ಯಾಪಾರ ಕೇಂದ್ರವಾಗಿದೆ. ಈ ಸ್ಥಳವನ್ನು ರಾಜೀವ್ ಚೌಕ್ ಎಂದೂ ಸಹ ಕರೆಯುತ್ತಾರೆ.

ಪಾಲಿಕಾ ಬಜಾರ್ : ಇದು ಸಿಪಿಯ ಹೃದಯಭಾಗದಲ್ಲಿರುವ ಒಂದು ದೊಡ್ಡ ಭೂಮಿಯ ಕೆಳಗಿನ ಮಾರುಕಟ್ಟೆಯಾಗಿದೆ. ಇದರಲ್ಲಿ 390 ಅಂಗಡಿಗಳು ಇವೆ. ಇವುಗಳಲ್ಲಿ ಹಲವು ತೆರನಾದ ವಸ್ತುಗಳು ದೊರೆಯುತ್ತವೆ. ಆದರು ಮುಖ್ಯವಾಗಿ ಸಿ.ಡಿಗಳು, ಡಿವಿಡಿಗಳು, ವಿಡಿಯೋ ಗೇಮ್‍ಗಳು ಮತ್ತು ಆಡಿಯೋ ಸಿಡಿಗಳು ನಿಮ್ಮ ಕೈಗೆಟುಕುವ ದರಕ್ಕೆ ಇಲ್ಲಿ ದೊರೆಯುತ್ತವೆ.

ಸಾಕೇತ್ ನ ಮಾಲ್‍ಗಳು : ಇಲ್ಲಿ ದೆಹಲಿಯ ಹಲವಾರು ವೈಭವೋಪೇತ ಮಾಲ್‍ಗಳನ್ನು ನೀವು ಕಾಣಬಹುದು. ಇದು ದೆಹಲಿಯ ಅತ್ಯಂತ ಪ್ರಸಿದ್ಧ ಮತ್ತು ಶ್ರೀಮಂತ ವ್ಯಾಪಾರ ಕೇಂದ್ರವಾಗಿದೆ. ಇಲ್ಲಿ ಸೆಲೆಕ್ಟ್ ಸಿಟಿ ವಾಕ್, ಡಿ ಎಲ್ ಎಫ್ ಪ್ಲೇಸ್ ಮತ್ತು ಎಮ್ ಜಿ ಎಫ್ ಮೆಟ್ರೋಪೋಲಿಟನ್‍ನಂತಹ ಶಾಪಿಂಗ್ ಮಾಲ್‍ಗಳನ್ನು ನೀವು ಕಾಣಬಹುದು.

ಪಹರ್ ಗಂಜ್ ಮಾರುಕಟ್ಟೆ : ನವದೆಹಲಿಯ ರೈಲು ನಿಲ್ದಾಣದ ಎದುರಿಗಿರುವ ಈ ಮಾರುಕಟ್ಟೆಯಲ್ಲಿ ಆಭರಣಗಳು, ಸುಗಂಧ ದ್ರವ್ಯಗಳು, ಶಾಲುಗಳು, ಹೊದಿಕೆಗಳು ಮತ್ತು ತಬಲಾದಂತಹ ಸಂಗೀತ ಉಪಕರಣಗಳನ್ನು ಕೊಳ್ಳಬಹುದು.

ಕಮಲ ನಗರ್ : ಬ್ರ್ಯಾಂಡೆಡ್ ಬಟ್ಟೆಗಳಿರಲಿ, ಪಾದರಕ್ಷೆಗಳಿರಲಿ ಅಥವಾ ಬ್ರ್ಯಾಂಡೆಡ್ ಉತ್ಪನ್ನ ಅಥವಾ ಸ್ಥಳೀಯ ಉತ್ಪನ್ನವಾಗಿರಲಿ ಎಲ್ಲವು ಇಲ್ಲಿ ರಸ್ತೆ ಬದಿಯಲ್ಲಿಯೆ ನಿಮಗೆ ದೊರೆಯುತ್ತವೆ. ಇದು ಕೊಳ್ಳುವವರಿಗೆ ಅತ್ಯಂತ ಮುದ ನೀಡುವ ವ್ಯಾಪಾರ ಕೇಂದ್ರವಾಗಿದೆ.

ರಾಜೌರಿ ಉದ್ಯಾನವನ ಮಾರುಕಟ್ಟೆ : ಮೇಲ್ಪರ್ಗದವರ ನೆಚ್ಚಿನ ವ್ಯಾಪಾರ ಕೇಂದ್ರ, ಇದು ಮದುವೆ ವಸ್ತ್ರಗಳಿಗೆ ಮತ್ತು ಸಾಧಾರಣ ಉಡುಗೆ ತೊಡುಗೆಗಳಿಗೆ ಹೆಸರುವಾಸಿಯಾಗಿದೆ. ಈ ಮಾರುಕಟ್ಟೆಯಲ್ಲಿ ತಾಂತ್ರಿಕವಾಗಿ ಅತ್ಯುತ್ತಮವೆನಿಸುವ ಮಾಲ್‍ಗಳು ಸಹ ನೆಲೆಗೊಂಡಿವೆ. ಇಲ್ಲಿ ಪ್ರಖ್ಯಾತ ಹೋಟೆಲ್‍ಗಳು ಮತ್ತು ಉಪಾಹಾರಗೃಹಗಳು ಹಾಗು ಸಿನಿಮಾ ಹಾಲ್‍ಗಳು ಸಹ ಇವೆ.

ಕೇಂದ್ರ ಮಾರುಕಟ್ಟೆ, ಲಜ್‍ಪತ್ ನಗರ್ : ಬ್ಯಾಗ್‍ಗಳು , ಪಾದರಕ್ಷೆಗಳು, ಬಟ್ಟೆಗಳು, ಭಾರತೀಯ ಸಾಂಪ್ರದಾಯಿಕ ಉಡುಗೆ ತೊಡುಗೆಗಳು ಅಥವಾ ಯಾವುದೇ ವಸ್ತುಗಳಾಗಲಿ ನಿಮಗೆ ಬೇಕಾದ ವಸ್ತುವನ್ನು ನೀವು ಕೊಳ್ಳಬೇಕಾದರೆ ಈ ಮಾರುಕಟ್ಟೆಗೆ ಒಮ್ಮೆ ಭೇಟಿಕೊಡಿ. ಅಲ್ಲದೆ ನೀವು ನಿಮ್ಮ ಕೈಗೆ ಮೆಹಂದಿಯಿಂದ ಅಲಂಕಾರವನ್ನು ಸಹ ಮಾಡಿಸಿಕೊಳ್ಳಬಹುದು. ಅದಕ್ಕಾಗಿ ಇಲ್ಲಿ ನಿಮಗಾಗಿ ಮೆಹಂದಿವಾಲಾಗಳು ರಸ್ತೆ ಬದಿಯಲ್ಲಿ ಕಾದು ಕುಳಿತಿರುತ್ತಾರೆ.

ಸರೋಜಿನಿ ಮಾರುಕಟ್ಟೆ : ದೆಹಲಿಯ ಅತ್ಯಂತ ಪರಿಶುದ್ಧ ಪ್ರದೇಶಗಳಲ್ಲಿ ಒಂದಾಗಿರುವ ಈ ಮಾರುಕಟ್ಟೆಯಲ್ಲಿ ನೀವು ಪಾತ್ರೆ-ಪಗಡೆಗಳನ್ನು, ಪಾದರಕ್ಷೆಗಳನ್ನು ಮತ್ತು ರಫ್ತಾಗದೆ ಉಳಿದ ಬಟ್ಟೆಯ ಉತ್ಪನ್ನಗಳನ್ನು ಕೊಳ್ಳಬಹುದು. ಈ ಮಾರುಕಟ್ಟೆಯು ಪ್ರತಿ ಸೋಮವಾರ ಮುಚ್ಚಲ್ಪಟ್ಟಿರುತ್ತದೆ.

ಕರೋಲ್ ಬಾಗ್ : ಪ್ರಸ್ತುತ ಇಲ್ಲಿ ದೊಡ್ಡ ದೊಡ್ಡ ಕಂಪೆನಿಗಳ ಹಲವಾರು ಪ್ರಮುಖ ಶೋರೂಮ್‍ಗಳು ತಲೆ ಎತ್ತಿವೆ. ದೆಹಲಿಯ ಅತ್ಯಧಿಕ ಜನದಟ್ಟಣೆಯನ್ನು ನೀವು ಇಲ್ಲಿನ ಪ್ರಮುಖ ರಸ್ತೆಗಳಾದ ಆರ್ಯ ಸಮಾಜ ರಸ್ತೆ, ಅಜ್ಮಲ್ ಖಾನ್ ರಸ್ತೆ ಮತ್ತು ಗಫರ್ ಮಾರುಕಟ್ಟೆಗಳಲ್ಲಿ ಕಾಣಬಹುದು. ಈ ಮಾರುಕಟ್ಟೆಗೆ ಭೇಟಿ ಕೊಟ್ಟಾಗ ಭಾರತೀಯ ಸಾಂಪ್ರದಾಯಿಕ ವಸ್ತ್ರಗಳು, ಶಾಲು ಮತ್ತು ಸೀರೆಗಳನ್ನು ಕೊಳ್ಳಲು ಮರೆಯಬೇಡಿ.

ಚಾಂದಿನಿ ಚೌಕ್ : ನೀವು ಭಾರತೀಯತೆಯ ಪ್ರತ್ಯೇಕತೆಯನ್ನು ಹೊಂದಿರುವ ಮಾರುಕಟ್ಟೆಯಲ್ಲಿ ವ್ಯಾಪಾರ ಮತ್ತು ವ್ಯವಹಾರ ಮಾಡಲು ಬಯಸುವಿರಾ? ಹಾಗಾದರೆ ನಿಮಗೆ ಚಾಂದಿನಿ ಚೌಕ್ ಹೇಳಿ ಮಾಡಿಸಿದ ತಾಣವಾಗಿದೆ. ಈ ಮಾರುಕಟ್ಟೆಯ ಸಂಧಿ-ಗೊಂದಿಗಳಲ್ಲಿ ಜನರು ಗಿಜಿಗಿಜಿಗುಟ್ಟುತ್ತಿರುತ್ತಾರೆ. ಇಲ್ಲಿ ನಿಮ್ಮ ಕುತೂಹಲ ಕೆರಳಿಸುವ ಹಲವಾರು ವಸ್ತುಗಳು ದೊರೆಯುತ್ತವೆ. ಅಲ್ಲದೆ, ಈ ಸ್ಥಳದಲ್ಲಿ ಅತ್ಯಂತ ಪ್ರಸಿದ್ಧ ಉಪಾಹಾರ ಗೃಹಗಳು ಮತ್ತು ದಿಲ್ಲಿ ಚಾಟ್ಸ್ ಎನ್ನುವ ಕುರುಕಲು ತಿಂಡಿಗಳ ಅಂಗಡಿಗಳು ಲಭ್ಯವಿದೆ.

ಖರಿ ಬವ್ಲಿ : ಇದು ಮಸಾಲೆಗಳಿಗೆ ಪ್ರಸಿದ್ಧಿ ಪಡೆದಿರುವ ಸ್ಥಳ. ದೆಹಲಿಯಲ್ಲಿ ನಿಮ್ಮ ವ್ಯಾಪಾರಕ್ಕೆ ಸ್ವಲ್ಪ ಮಸಾಲೆ ಬೆರೆಸಲು ನೀವು ಇಲ್ಲಿಗೆ ಬರಬೇಕು. ಇಲ್ಲಿ ಘಮಘಮಿಸುವ ಭಾರತೀಯ ಚಾಯ್ ಮಿಕ್ಸ್, ಏಲಕ್ಕಿ ಮತ್ತು ಇನ್ನಿತರ ಮಸಾಲೆ ಪದಾರ್ಥಗಳನ್ನು ನೀವು ಕೊಳ್ಳಬಹುದು. ಹಳೆ ದೆಹಲಿಯಲ್ಲಿರುವ ಸಗಟು ಮಾರುಕಟ್ಟೆಯಲ್ಲಿ ಈ ಮಸಾಲೆ ಪದಾರ್ಥಗಳನ್ನು ಕೊಂಡು ನಿಮ್ಮ ಸಸ್ಯಾಹಾರ ಮತ್ತು ಮಾಂಸಾಹಾರಗಳ ರುಚಿಯನ್ನು ಮತ್ತಷ್ಟು ಹೆಚ್ಚಿಸಬಹುದು.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat