Search
  • Follow NativePlanet
Share
ಮುಖಪುಟ » ಸ್ಥಳಗಳು » ದೆಹಲಿ » ಆಕರ್ಷಣೆಗಳು » ಸಫ್ದರ್ ಜಂಗ್ ಸಮಾಧಿ

ಸಫ್ದರ್ ಜಂಗ್ ಸಮಾಧಿ, ದೆಹಲಿ

7

ದೆಹಲಿ ನಗರದಲ್ಲಿರುವ ಅತ್ಯಂತ ಪುರಾತನ ಟೂಂಬ್ ಅಥವಾ ಸಮಾಧಿ ಇದಾಗಿದೆ. ಸಫ್ದರ್ ಜಂಗ್ ಸಮಾಧಿಯನ್ನು 1753 ರಲ್ಲಿ ಅವಧ್ ಪ್ರದೇಶದ ನವಾಬನಾದ ಶಿಯಾ-ಉದ್-ದೌಲ್ ತನ್ನ ತಂದೆ ಸಫ್ದರ್ ಜಂಗ್ ವಿಧಿವಶರಾದಾಗ ಅವರ ಸ್ಮರಣಾರ್ಥವಾಗಿ ಸಮಾಧಿಯನ್ನು ಇಲ್ಲಿ ನಿರ್ಮಿಸಿದನು. ಈ ಸಮಾಧಿಯು ಬಿಳಿಬಣ್ಣದ ಮಾರ್ಬಲ್ ಕಲ್ಲಿನಿಂದ ನಿರ್ಮಿಸಲಾಗಿದ್ದು, ಮುಘಲ್ ಕಲಾಕೃತಿಯ ಕಡೆಯ ವಾಸ್ತುಶಿಲ್ಪ ಇದಾಗಿದೆ.

ಸುಮಾರು 300 ಚದುರ ಕಿ.ಮೀ.ವಿಸ್ತೀರ್ಣ ಹೊಂದಿರುವ ಈ ಸಮಾಧಿ ಸ್ಥಳದ ಪ್ರವೇಶ ದ್ವಾರವು ಕೆಂಪು ಮರಳಿನ ಹಾಸಿಗೆ ಹೊಂದಿದ್ದು ಅದರ ಸುತ್ತಮುತ್ತಲಿರುವ ಕಲಾಕೃತಿಗಳು ಅತ್ಯಂತ ಆಕರ್ಷಕವಾಗಿದೆ. ಸಮಾಧಿಯ ಮಧ್ಯ ಭಾಗದಲ್ಲಿರುವ ಕಮಾನು, ತನ್ನ ಆಕರ್ಷಕ ಬಣ್ಣಗಳಿಂದ ಎಲ್ಲರನ್ನು ಸೆಳೆಯುತ್ತದೆ. ಒಂಭತ್ತು ಸಣ್ಣ ಸಮಾಧಿಗಳ ನಡುವೆ ಎತ್ತರವಾಗಿ ನಿರ್ಮಿಸಲಾಗಿರುವ ದೊಡ್ಡದಾದ ಈ ಬಿಳಿ ಸಮಾಧಿಯು ಆಕರ್ಷಕವಾಗಿದೆ. ಈ ಎಲ್ಲಾ ಕಲಾಕೃತಿಗಳು ಮುಘಲರ ಸಾಮ್ರಾಜ್ಯದ ಕಡೆಯ ಕಲಾಕೃತಿಗಳಾಗಿವೆ.

ಇದರ ಸುತ್ತಲೂ ಎತ್ತರವಾದ ಗೋಡೆಗಳಿದ್ದು ಒಳಗೆ ಕಾರಂಜಿಗಳು, ಮುಘಲ್ ಉದ್ಯಾನವನ ದೆಹಲಿಗೆ ಬರುವ ಪ್ರವಾಸಿಗರನ್ನು ಮೊದಲು ತನ್ನತ್ತ ಸೆಳೆದುಕೊಳ್ಳುತ್ತದೆ. ಈ ಸಮಾಧಿಗೆ ಸುಮಾರು 16 ಮಂಟಪಗಳಿದ್ದು ಅವುಗಳಲ್ಲಿ ಮೋತಿ ಮಹಲ್, ಜಂಗ್ಲಿ ಮಹಲ್ ಹಾಗೂ ಬಾದಷಾ ಮಹಲ್ ಹೆಸರುವಾಸಿಯಾದವುಗಳು.

ಸಫ್ದರ್ ಜಂಗ್ ಸಮಾಧಿ ಸದಾಕಾಲ ಪ್ರವಾಸಿಗರಿಗೆ ತೆರೆದಿರುತ್ತದೆ. ಸಮಾಧಿಯ ಸುತ್ತಲಿನ ಪ್ರದೇಶವನ್ನೇಲ್ಲಾ ಇದೇ ಹೆಸರಿನಿಂದ ಕರೆಯಲಾಗುತ್ತದೆ.

One Way
Return
From (Departure City)
To (Destination City)
Depart On
11 Mar,Wed
Return On
12 Mar,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
11 Mar,Wed
Check Out
12 Mar,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
11 Mar,Wed
Return On
12 Mar,Thu