Search
  • Follow NativePlanet
Share
ಮುಖಪುಟ » ಸ್ಥಳಗಳು » ದೆಹಲಿ » ಆಕರ್ಷಣೆಗಳು » ರಾಜ್ ಘಾಟ್

ರಾಜ್ ಘಾಟ್, ದೆಹಲಿ

4

ದೆಹಲಿಯಲ್ಲಿರುವ ರಾಜ್ ಘಾಟ್ ಗೆ ವಿಶೇಷ ಪರಿವಿಡಿ/ವಿವರಣೆ ನೀಡುವುದರ ಅಗತ್ಯವಿಲ್ಲ. ಇದು ಮಹಾತ್ಮ ಗಾಂಧಿಯವರ ಅಂತ್ಯಸಂಸ್ಕಾರ ಮಾಡಿದ  ಸ್ಥಳ ಮತ್ತು ಇದನ್ನು ಜನವರಿ 31, 1948 ರಂದು ಅವರ ಹತ್ಯೆಯಾದ ನಂತರ ನಿರ್ಮಿಸಲಾಯಿತು. ಇದು ಇತ್ತೀಚಿನ ದಿನಗಳಲ್ಲಿ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತಿದ್ದು, ಈಗ ಎಲ್ಲಾ ವಿದೇಶಿ ಪ್ರತಿನಿಧಿಗಳು ಭಾರತಕ್ಕೆ ಭೇಟಿ ನೀಡಿದಾಗ ರಾಜ್ ಘಾಟ್ ಗೂ ಭೇಟಿ ನೀಡಿ ಮಹಾತ್ಮ ಗಾಂಧಿಗೆ ಗೌರವ ಸೂಚಿಸುವುದು ಕಡ್ಡಾಯವಾಗಿದೆ.

ರಾಜ್ ಘಾಟ್ ಯಮುನಾ ನದಿ ದಡದಲ್ಲಿರುವ ಮಹಾತ್ಮ ಗಾಂಧಿ ಮಾರ್ಗದಲ್ಲಿದೆ. ಇದೊಂದು ದೆಹಲಿಯ ಪ್ರಮುಖವಾದ ಪ್ರವಾಸಿ ತಾಣವಾಗಿದ್ದು, ಪ್ರತಿದಿನ ಸಹಸ್ರಾರು ಜನ ಇಲ್ಲಿಗೆ ಭೇಟಿ ನೀಡುತ್ತಾರೆ. ಈ ಸ್ಮಾರಕವು ಕಪ್ಪು ಅಮೃತಶಿಲೆಯಿಂದ ಕಟ್ಟಿದ ಚೌಕಾಕಾರದ ಚಪ್ಪಟೆ ವೇದಿಕೆಯಾಗಿದೆ. ಸ್ಮಾರಕವು ಒಂದು ಕಲ್ಲು ಕಾಲುದಾರಿ ಮತ್ತು ಹಸಿರು ಹುಲ್ಲುಹಾಸುಗಳಿಂದ ಸುತ್ತಲೂ ಆವರಿಸಲ್ಪಟ್ಟಿದೆ ಮತ್ತು ಸಮಾಧಿ ಮೇಲೆ ’ಹೇ ರಾಮ್’ ಎಂದು ಕೆತ್ತಲಾಗಿದೆ. ಈ ಪದಗಳನ್ನು ಮಹಾತ್ನ ಗಾಂಧಿ ಕೊನೆಯದಾಗಿ ಉಚ್ಚರಿಸಿದ ಪದಗಳು ಎಂದು ನಂಬಲಾಗಿದೆ.

ಈ ಪ್ರಸಿದ್ಧ ಸ್ಮಾರಕವನ್ನು ನೋಡಲು ಬರುವವರು ಕೆಲವು ವಿಷಯಗಳನ್ನು ನೆನಪಿಡಬೇಕು. ಗಾಂಧಿ ನೆನಪಿಗಾಗಿ ಗೌರವ ಸೂಚನೆ, ಭೇಟಿಮಾಡುವವರು ಚಪ್ಪಲಿಗಳನ್ನು ತೆಗೆದಿಟ್ಟು ಒಳಗೆ ಪ್ರವೇಶಿಸಬೇಕು. ಜೊತೆಗೆ ಪ್ರತಿ ಶುಕ್ರವಾರ ಗಾಂಧಿ ಸ್ಮರಣಾರ್ಥ ಸಮಾರಂಭಗಳು ನಡೆಯುತ್ತವೆ. ಅಲ್ಲದೇ ಗಾಂಧಿ ಹುಟ್ಟು ಹಾಗೂ ಸಾವಿನ ಸ್ಮರಣಾರ್ಥ ಪ್ರತಿ ವರ್ಷ ಪ್ರಾರ್ಥನೆಗಳನ್ನು ನೆರೆವೇರಿಸಲಾಗುತ್ತದೆ. ಈ ಸ್ಮಾರಕವು ವನು.ಜಿ.ಭೂತ ಎಂಬ ವ್ಯಕ್ತಿಯಿಂದ ವಿನ್ಯಾಸಗೊಳಿಸಲಾಗಿದ್ದು, ಇಲ್ಲಿನ ವಾಸ್ತು ಶಿಲ್ಪವು ಮಹಾತ್ಮನ ’ಸರಳತೆ’ ಎಂಬ ಮಂತ್ರವನ್ನು ಪ್ರಕಟಿಸುತ್ತವೆ. ಆದಾಗ್ಯೂ, ಸ್ಮಾರಕ ನಿರ್ಮಾಣದ ಸಮಯದಲ್ಲಿ ತನ್ನ ವಿನ್ಯಾಸದಲ್ಲಿ ಅನೇಕ ಬದಲಾವಣೆಗಳನ್ನು ಕಂಡಿದೆ.

ನೀವು ರಾಜ್ ಘಾಟ್ ಭೇಟಿ ಮಾಡಿದಾಗ, ಕೇವಲ ಸ್ಮಾರಕವೂ ಮಾತ್ರ ನೋಡ ಸಿಗುವುದಿಲ್ಲ ಜೊತೆಗೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರತವನ್ನು ಆಳಿದ ವಿವಿಧ ಪ್ರಮುಖ ರಾಜಕೀಯ ನಾಯಕರ ಸ್ಮಾರಕಗಳನ್ನು ಸಹ ಕಾಣಬಹುದು. ಶಾಂತಿವನ - ಜವಾಹರ ಲಾಲ್ ನೆಹರು ಸ್ಮಾರಕ, ವಿಜಯ್ ಘಾಟ್ - ಲಾಲ್ ಬಹದ್ಧೂರ್ ಶಾಸ್ತ್ರೀ ಸ್ಮಾರಕ, ಶಕ್ತಿ ಸ್ಥಳ್/ಲ್ - ಇಂದಿರಾ ಗಾಂಧಿ ಸ್ಮಾರಕ, ಏಕತಾ ಸ್ಥಳ - ಗಿಯಾನಿ ಜೈಲ್ ಸಿಂಗ್ ಸ್ಮಾರಕ ಮತ್ತು ವೀರ ಭೂಮಿ - ರಾಜೀವ ಗಾಂಧಿ ಸಮಾಧಿ ಇಲ್ಲಿರುವ ಇನ್ನೂ ಹಲವು ಪ್ರಮುಖ ಆಕರ್ಷಣೆಗಳು.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed