Search
  • Follow NativePlanet
Share
ಮುಖಪುಟ » ಸ್ಥಳಗಳು » ದೆಹಲಿ » ಆಕರ್ಷಣೆಗಳು » ರಾಷ್ಟ್ರೀಯ ನಾಟಕ ಶಾಲೆ

ರಾಷ್ಟ್ರೀಯ ನಾಟಕ ಶಾಲೆ, ದೆಹಲಿ

1

ಎನ್.ಎಸ್.ಡಿ ಎಂದೇ ಹೆಸರುವಾಸಿಯಾದ ರಾಷ್ಟ್ರೀಯ ನಾಟಕ ಶಾಲೆಯು ಸ್ವಾಯತ್ತತೆಯ ಸಂಸ್ಥೆಯಾಗಿದ್ದು, ಸಚಿವಾಲಯ ಸಂಸ್ಕೃತಿಯ ಅಡಿಯಲ್ಲಿ 1959 ರಲ್ಲಿ ಸ್ಥಾಪಿಸಲಾಗಿದೆ. ಇದೊಂದು ರಂಗ ತರಬೇತಿ ಸಂಸ್ಥೆಯಾಗಿದೆ. ಸ್ವಾಯತ್ತತೆಯ ವಿಶ್ವವಿದ್ಯಾನಿಲಯದ ಸ್ಥಾನಮಾನವನ್ನು ಹೊಂದಿದ್ದು ಇದನ್ನು ಸಂಗೀತ ನಾಟಕ ಅಕಾಡೆಮಿಯಾಗಿ ಸ್ಥಾಪಿಸಲಾಗಿದೆ.

ಸಂಸ್ಥೆಯು, ವಿದ್ಯಾರ್ಥಿಗಳಿಗೆ ಯೋಜಿತ ಪಠ್ಯಕ್ರಮದ ಸಹಾಯದಿಂದ ಚೆನ್ನಾಗಿ ರಂಗಭೂಮಿ ತರಬೇತಿ ನೀಡುತ್ತದೆ. ರಂಗಭೂಮಿಗೆ ಸಂಬಂಧಿಸಿದ ಪ್ರತಿಯೊಂದು ಅಂಶವನ್ನು ಜಾಗರೂಕತೆಯಿಂದ ಕಲಿಸಲಾಗುತ್ತದೆ.

ಎನ್.ಎಸ್.ಡಿ ರೆಪರ್ಟರಿ ಕಂಪನಿ ಮತ್ತು ಸಂಸ್ಕಾರ ರಂಗ ತೊಲಿ ಅಥವಾ ರಂಗಭೂಮಿ ಶಿಕ್ಷಣ ಸಂಸ್ಥೆ (ಥಿಯೇಟರ್ ಇನ್ ಎಜ್ಯುಕೇಶನ್ ಕಂಪನಿ) ಎಂಬ ಎರಡು ಪ್ರದರ್ಶನ ಪಕ್ಕೆಲಗಳನ್ನು (ಸಹಭಾಗಿ) ಹೊಂದಿದೆ. ರೆಪರ್ಟರಿ ಕಂಪನಿಯನ್ನು ವರ್ಷ 1964 ರಲ್ಲಿ ಸ್ಥಾಪಿಸಲಾಯಿತು. ಇದು ನಿರ್ಮಾಣದುದ್ದೇಶವು, ಸಂಘಟಿಸುವ ಉತ್ಸವಗಳು ಮತ್ತು ಹಳೆಯ ಮತ್ತು ಹೊಸ ನಾಟಕಗಳ ಪ್ರಸ್ತುತಿ ಮೊದಲಾದ ಪ್ರದರ್ಶನಗಳಿಗಾಗಿ ಸ್ಥಾಪಿತವಾಗಿದೆ. ಹಾಗೆಯೇ ರಂಗಭೂಮಿಯಲ್ಲಿ ಶಿಕ್ಷಣ ಸಂಸ್ಥೆಯನ್ನು 1989 ರಲ್ಲಿ ಸ್ಥಾಪಿಸಲಾಗಿದ್ದು, ಒಂದು ಸಮೂಹದಲ್ಲಿ ಕೆಲಸ ಮಾಡುವ ನಟರು ಮಕ್ಕಳಿಗಾಗಿ ಪ್ರದರ್ಶನ ಮಾಡುವ ಶಿಕ್ಷಕರಿಗಾಗಿ ನಿರ್ಮಾಣ ಮಾಡಲಾಗಿದೆ. ಈ ಕಂಪನಿಯು ಹೆಚ್ಚಾಗಿ ವಿವಿಧ ವಯೋವರ್ಗದ ಮಕ್ಕಳಿಗೆ ಶಾಲೆಯಲ್ಲಿ  ಜಷ್ನ್ ಇ ಬಚ್ಪನ್ ಮತ್ತು ಬಾಲ ಸಂಗಮ ಎಂಬ ಅತಿಥೇಯ ವಾರ್ಷಿಕ ನಾಟಕ ಉತ್ಸವಗಳ ಪ್ರದರ್ಶನವನ್ನು ಜಾರಿಗೆ ತಂದಿದ್ದು, ಪಠ್ಯಕ್ರಮ ಆಧಾರಿತ ಸೃಜನಶೀಲ ನಾಟಕಗಳ ನಿರ್ಮಾಣಗಳಲ್ಲಿ ತೊಡಗಿದೆ.

ಎನ್.ಎಸ್.ಡಿ ತನ್ನದೇ ಆದ ಪ್ರಕಟಣಾ ಘಟಕವನ್ನು ಹೊಂದಿದೆ. ಇಲ್ಲಿ ರಂಗಭೂಮಿಗೆ ಸಂಬಂಧಿಸಿದ ಪಠ್ಯ ಪುಸ್ತಕಗಳನ್ನು ಪ್ರಕಟಿಸಲಾಗುತ್ತದೆ ಮತ್ತು ರಂಗಮಂದಿರಗಳ ಪ್ರಕಾಶಿತವನ್ನು ಇಂಗ್ಲೀಷ್ ನಿಂದ ಹಿಂದಿಗೆ ಅನುವಾದಿಸಲಾಗುತ್ತದೆ. ಎನ್.ಎಸ್.ಡಿ ಸಂಸ್ಥೆಯು ಭಾರತದಾದ್ಯಂತ ತನ್ನ ಪ್ರಾದೇಶಿಕ ಸಂಪನ್ಮೂಲ ಕೇಂದ್ರಗಳನ್ನು ಹೊಂದಿದೆ. ಇದರ ಪ್ರಥಮ ಕೇಂದ್ರ 1994 ರಲ್ಲಿ ಬೆಂಗಳೂರಿನಲ್ಲಿ ಪ್ರಾರಂಭವಾಯಿತು.

ಎನ್.ಎಸ್.ಡಿ ಸಂಸ್ಥೆಯು ಪ್ರತಿವರ್ಷ ಭಾರತ್ ರಂಗ ಮಹೋತ್ಸವ ಎಂಬ ರಂಗ ಹಬ್ಬವನ್ನು ರಾಷ್ಟ್ರೀಯ ವಾರ್ಷಿಕ ನಾಟಕೋತ್ಸವವನ್ನು ನವ ದೆಹಲಿಯಲ್ಲಿ ನಡೆಸುತ್ತಿದ್ದು ಇದು ಏಷ್ಯಾದಲ್ಲಿಯೇ ಅತೀ ದೊಡ್ಡ ನಾಟಕ ಉತ್ಸವ ಎನ್ನಲಾಗುತ್ತದೆ.

One Way
Return
From (Departure City)
To (Destination City)
Depart On
10 Jul,Fri
Return On
11 Jul,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Jul,Fri
Check Out
11 Jul,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Jul,Fri
Return On
11 Jul,Sat