Search
  • Follow NativePlanet
Share
ಮುಖಪುಟ » ಸ್ಥಳಗಳು » ದೆಹಲಿ » ಆಕರ್ಷಣೆಗಳು » ರಾಷ್ಟ್ರೀಯ ರೈಲ್ವೆ ಮ್ಯೂಸಿಯಂ

ರಾಷ್ಟ್ರೀಯ ರೈಲ್ವೆ ಮ್ಯೂಸಿಯಂ, ದೆಹಲಿ

4

ದಿಲ್ಲಿಯ ಪ್ರಮುಖ ಆಕರ್ಷಣೆಗಳಲ್ಲಿ ರಾಷ್ಟ್ರೀಯ ರೈಲ್ವೆ ಮ್ಯೂಸಿಯಂ ಕೂಡ ಒಂದು. ಇದನ್ನು ರೈಲ್ವೆ ಹೆರಿಟೇಜ್‌ ಆಫ್‌ ಇಂಡಿಯಾ ನಿರ್ವಹಿಸುತ್ತಿದೆ. ಇದು ಇಲ್ಲಿನ ಚಾಣಕ್ಯಪುರಿಯಲ್ಲಿದ್ದು, 1977 ರ ಫೆಬ್ರವರಿ 1ರಂದು ಆರಂಭವಾಗಿದೆ.

ಈ ಮ್ಯೂಸಿಯಂನಲ್ಲಿ ಭಾರತೀಯ ರೈಲ್ವೆಗೆ ಸೇರಿದ 100 ಪ್ರದರ್ಶನ ಸಾಮಗ್ರಿಗಳು ಇವೆ. ಇಲ್ಲಿ ಚಾಲನಾಸ್ಥಿತಿಯಲ್ಲಿರುವ ಹಾಗೂ ಸ್ಥಗಿತಗೊಂಡ ರೈಲು ಮಾದರಿಗಳಿವೆ. ಅನೇಕ ಅಪರೂಪದ ಯಂತ್ರೋಪಕರಣ, ಪೀಠೋಪಕರಣ, ಐತಿಹಾಸಿಕ ಛಾಯಾಚಿತ್ರ, ಐತಿಹಾಸಿಕ ನೆನಪುಗಳ ಚಿತ್ರಣ ನೀಡುವ ಸಾಧನಗಳು ಇಲ್ಲಿವೆ. ವಿಶೇಷ ಎಂದರೆ ಈ ಕೋಚ್‌ಗಳಲ್ಲಿ ಪ್ರಿನ್ಸೆಸ್‌ ಆಫ್‌ ವಾಲ್ಸ್‌ ಸಲೂನ್‌ ಹಾಗೂ ಮೈಸೂರು ಮಹಾರಾಜರ ಸಲೂನು ಕೂಡ ಇದೆ.

ಮ್ಯೂಸಿಯಂನ ಇತರೆ ಆಕರ್ಷಣೆಗಳೆಂದರೆ ದಿ ಫೆರ್ರಿ ಕ್ವೀನ್‌, ಪಟಿಯಾಲಾ ರಾಜ್ಯದ ಮೋನೊರೈಲು ಮಾರ್ಗ, ಫೈರ್‌ ಎಂಜಿನ್‌, ಕ್ರೇನ್‌ ಟ್ಯಾಂಕ್‌, ಕಲಕಾ ಶಿಮ್ಲಾ ರೈಲು ಬಸ್‌, ಅಗ್ನಿ ರಹಿತ ಉಗಿ ಎಂಜಿನ್‌ ಮತ್ತಿತರವು ಪ್ರದರ್ಶನಕ್ಕಿವೆ. ಇದರಲ್ಲಿಯೇ ದಿ ಫೆರ್ರಿ ಕ್ವೀನ್‌ ಅತ್ಯಂತ ಹಳೆಯ ಉಗಿ ಬಂಡಿ ಆಗಿದೆ. ಇದು ಗಿನ್ನಿಸ್‌ ದಾಖಲೆಗೂ ಭಾಜನವಾಗಿರುವುದು ವಿಶೇಷ.

ಆಟಿಕೆ ರೈಲು ಇಲ್ಲಿನ ಮ್ಯೂಸಿಯಂ ಸುತ್ತ ಕರೆದೊಯ್ದು ಎಲ್ಲವನ್ನೂ ತೋರಿಸುವ ಕಾರ್ಯ ಮಾಡುತ್ತದೆ. ಇದು ಕೂಡ ಮ್ಯೂಸಿಯಂನ ಪ್ರಮುಖ ಆಕರ್ಷಣೆ. ಸೋಮವಾರ ಹೊರತುಪಡಿಸಿ ಉಳಿದೆಲ್ಲಾ ದಿನ ಇದು ತೆರೆದಿರುತ್ತದೆ. ಬೆಳಗ್ಗೆ 10 ರಿಂದ ಸಂಜೆ 6 ರ ನಡುವೆ ಜನ ವೀಕ್ಷಿಸಲು ಆಗಮಿಸುಬಹುದು.

One Way
Return
From (Departure City)
To (Destination City)
Depart On
25 Apr,Sat
Return On
26 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Sat
Check Out
26 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Sat
Return On
26 Apr,Sun